ಮಂಡ್ಯ ಲೋಕಸಭಾ ಕ್ಷೇತ್ರ : ನಿಖಿಲ್ ವಿರುದ್ಧ ಸುಮಲತಾ ಮುನ್ನಡೆ -Vishwanews24

Featured, ರಾಜ್ಯ ನ್ಯೂಸ್

ಮಂಡ್ಯ,:ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಮುನ್ನಡೆ ಸಾಧಿಸಿದ್ದಾರೆ. ಸುಮಲತಾರವರು 535 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಅತೀ ಸೂಕ್ಷ್ಮ ಕ್ಷೇತ್ರವಾಗಿರುವ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯವರು ನಿರಂತರ ಮುನ್ನಡೆ ಸಾಧಿಸಿದ್ದು, ಇದೀಗ ಸುಮಲತಾರವರು ಮುನ್ನಡೆ ಸಾಧಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ ಫಲಿತಾಂಶ ಉಸಿರು ಹಿಡಿದು ನೋಡಬೇಕಾಗಿದೆ.ಕೊನೆಯ ಹಂತದ ಮತ ಎಣಿಕೆವರೆಗೂ ಕುತೂಹಲವನ್ನು ಹುಟ್ಟಿಸುವ ಒಂದು ಪ್ರತಿಷ್ಠೆಯ ಕಣವಾಗಿದೆ ಮಂಡ್ಯ.