ಮಗನಿಗೆ ತಪ್ಪಿದ ಬಿಜೆಪಿ ಟಿಕೆಟ್: ನಾನು ಪಕ್ಷದ ತೀರ್ಮಾನಕ್ಕೆ ಬದ್ದ – ಕೆ.ಎಸ್.ಈಶ್ವರಪ್ಪ :- Vishwanews24
ಮಗನಿಗೆ ತಪ್ಪಿದ ಬಿಜೆಪಿ ಟಿಕೆಟ್: ನಾನು ಪಕ್ಷದ ತೀರ್ಮಾನಕ್ಕೆ ಬದ್ದ – ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಕೊನೆಗೂ ಘೋಷಣೆಯಾಗಿದೆ. ಟಿಕೆಟ್ ಆಕಾಂಷಿಯಾಗಿದ್ದ ಕೆ.ಇ.ಕಾಂತೇಶ್ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಶಿವಮೊಗ್ಗ ನಗರ ಕ್ಷೇತ್ರಕ್ಕೆ ಚನ್ನಬಸಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ,ಶಿವಮೊಗ್ಗ ನಗರ ಕ್ಷೇತ್ರಕ್ಕೆ ಚನ್ನಬಸಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಪಕ್ಷದ ವರಿಷ್ಠರು ಅವರನ್ನು ಆಯ್ಕೆ ಮಾಡಿದ್ದಾರೆ. ನಾನು ಪಕ್ಷದ ತೀರ್ಮಾನಕ್ಕೆ ಬದ್ದ. ವರಿಷ್ಠರ ಆಯ್ಕೆಯನ್ನು ಯಾರು ಪ್ರಶ್ನೆ ಮಾಡುವ ಹಾಗೆ ಇಲ್ಲ. ಚೆನ್ನಬಸಪ್ಪ ಗೆಲ್ಲುವವರೆಗೂ ಸುಮ್ಮನೆ ಕೂರುವುದಿಲ್ಲ ಎಂದಿದ್ದಾರೆ.
ಮಂಗಳೂರು: ಉಳ್ಳಾಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಆಸ್ತಿ ವಿವರ – Vishwanews24
ಕಾಂತೇಶ್ ಗೆ ಮುಂದಿನ ದಿನಗಳಲ್ಲಿ ಅವನ ಕಾರ್ಯವೈಖರಿ ನೋಡಿ ಪಕ್ಷ ಸೂಕ್ತಮಾನ ಕೊಡುವ ಬಗ್ಗೆ ನಿರ್ಧಾರ ಮಾಡುತ್ತದೆ. ಇವತ್ತಿಗೆ ಇದು ಮುಗಿದು ಹೋಗಿಲ್ಲ. ಪಕ್ಷದ ನಾಯಕರು ಎಲ್ಲವನ್ನೂ ಅಳೆದು ತೂಗಿ ನಿರ್ಧಾರ ಮಾಡಿರುತ್ತಾರೆ ಎಂದರು.
ತಪ್ಪಿದ ಕೈ ಟಿಕೆಟ್- ಮೊಯಿದ್ದೀನ್ ಬಾವಾ ಕಾಂಗ್ರೆಸ್ ಗೆ ರಾಜೀನಾಮೆ -ಜೆಡಿಎಸ್ ನಿಂದ ಕಣಕ್ಕೆ – Vishwanews24
