ಮಠಾಧೀಶರಿಗೆ ರಾಜಕೀಯ ಯಾಕೆ ಬೇಕು? ಅಷ್ಟು ಆಸಕ್ತಿಯಿದ್ದರೆ ನಮ್ಮ ಜೊತೆ ವಿಧಾನಸೌಧಕ್ಕೆ ಬರಲಿ : ಬಸವರಾಜ ಹೊರಟ್ಟಿ -Vishwanews24

Featured, ರಾಜ್ಯ ನ್ಯೂಸ್

ಮಠಾಧೀಶರಿಗೆ ರಾಜಕೀಯ ಯಾಕೆ ಬೇಕು? ಅಷ್ಟು ಆಸಕ್ತಿಯಿದ್ದರೆ ನಮ್ಮ ಜೊತೆ ವಿಧಾನಸೌಧಕ್ಕೆ ಬರಲಿ : ಬಸವರಾಜ ಹೊರಟ್ಟಿ -Vishwanews24

ಕಾರವಾರ: ‘ಮಠಾಧೀಶರಿಗೆ ರಾಜಕೀಯ ಯಾಕೆ ಬೇಕು? ಅಷ್ಟು ಆಸಕ್ತಿಯಿದ್ದರೆ ನಮ್ಮ ಜೊತೆ ವಿಧಾನಸೌಧಕ್ಕೆ ಬರಲಿ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಮುದಾಯಗಳ ಅಭಿವೃದ್ಧಿಗೆ ನಾವು ರಾಜಕಾರಣಿಗಳಿದ್ದೇವೆ. ಸ್ವಾಮೀಜಿಗಳು ಅವರ ಮಠದಲ್ಲಿದ್ದುಕೊಂಡು ಸಮಾಜವು ಶಾಂತವಾಗಿ ಇರುವಂತೆ ನೋಡಿಕೊಳ್ಳಬೇಕು. ಅದುಬಿಟ್ಟು ರಾಜಕಾರಣ ಯಾಕೆ ಬೇಕು’ ಎಂದು ಖಾರವಾಗಿ ಪ್ರಶ್ನಿಸಿದರು.

‘ಸರ್ಕಾರವು ಜಾತಿಗೊಂದು ನಿಗಮ ರಚಿಸಲು ಮುಂದಾಗಿರುವುದೇ ತಪ್ಪು. ಈ ವಿಚಾರದಲ್ಲಿ ಸ್ವಾಮೀಜಿಗಳು ಮಧ್ಯಪ್ರವೇಶಿಸುವುದೂ ಸರಿಯಲ್ಲ’ ಎಂದು ಅವರು ಹೇಳಿದರು.