ಮಣಿಪಾಲ: ಎಂಐಟಿ ವಿದ್ಯಾರ್ಥಿ ನಾಪತ್ತೆ – Vishwanews24

Featured, ಉಡುಪಿ

ಮಣಿಪಾಲ: ಎಂಐಟಿ ವಿದ್ಯಾರ್ಥಿ ನಾಪತ್ತೆ

ಮಣಿಪಾಲ : ಹೆರ್ಗಾ ಗ್ರಾಮದ ಈಶ್ವರ ನಗರದ ನಿವಾಸಿ ಎಂ.ಐ.ಟಿಯ ತೆಲಂಗಾಣ ಮೂಲದ ವಿದ್ಯಾರ್ಥಿಯೊಬ್ಬರು ಮಾ.1 ರಿಂದ ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ತೆಲಂಗಾಣ ಇಬ್ರಾಹಿಮ್‌ ನಗರದ ನಿವಾಸಿ ಆದಿತ್ಯ ಪಾಂಡೆ (20) ನಾಪತ್ತೆಯಾಗಿರುವವರು.

ಕಾಪು: ಸರಕಾರಿ ಅಧಿಕಾರಿಗೆ ಸುಳ್ಳು ಮಾಹಿತಿಯನ್ನು ನೀಡಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ : ದೂರು ದಾಖಲು – Vishwanews24

ಮಣಿಪಾಲದ ಹೆರ್ಗಾ ಗ್ರಾಮದ ಈಶ್ವರ ನಗರದಲ್ಲಿರುವ ಪವಿತ್ರ ರೆಸಿಡೆನ್ಸಿಯಲ್ಲಿ ವಾಸವಾಗಿದ್ದ ಅದಿತ್ಯ ಪಾಂಡೆ ಅವರು ಎಂ ಐ ಟಿ ಕಾಲೇಜಿನಲ್ಲಿ 3 ನೇ ವರ್ಷದ ವ್ಯಾಸಾಂಗ ಮಾಡುತ್ತಿದ್ದರು. ಇವರಿಗೆ ಮೊಬೈಲ್‌ ನಲ್ಲಿ ಆನ್‌ ಲೈನ್‌ ಆಟ ಆಡುವ ಅಭ್ಯಾಸವಿದ್ದು ಇದೇ ವಿಷಯದಲ್ಲಿ ಮಾನಸಿಕ ಕಿನ್ನತೆಗೊಳಗಾಗಿದ್ದರು. ಮಾ.1 ರಂದು ರಾತ್ರಿ 10.45 ರ ಸುಮಾರಿಗೆ ತನ್ನ ರೂಮಿನಿಂದ ಹೊರಗೆ ಹೋಗಿದ್ದ ಅವರು, ಈ ವೆರೆಗೂ ವಾಪಾಸು ಬಾರದೇ ಕಾಣೆಯಾಗಿದ್ದಾರೆ. ಆದಿತ್ಯ ಪಾಂಡೆರವರ ಬಗ್ಗೆ ಸಂಬಂದಿಕರ ಮತ್ತು ಸ್ನೇಹಿತರ ಮನೆಯಲ್ಲಿ ವಿಚಾರಿಸಿ ಹುಡುಕಾಡಿದರೂ ಎಲ್ಲೂ ಈ ತನಕ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಆದಿತ್ಯ ಅವರ ತಮ್ಮ ಕೃಷ್ಣ ಪಾಂಡೆ ಎಂಬವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ:  ಬೇನಾಮಿ ಆಸ್ತಿ ಆರೋಪ :  ಕಾರ್ಕಳ ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಮುತಾಲಿಕ್ – Vishwanews24

Leave a Reply