ಮಣಿಪಾಲ : ಯುವಕನ ಅಪಹರಿಸಿ ಹಲ್ಲೆ, ಜೀವ ಬೆದರಿಕೆ – vishwanews24
ಮಣಿಪಾಲ : ಗಾಂಜಾ ಮಾರಾಟದ ಬಗ್ಗೆ ಹಫ್ತಾ ನೀಡುವಂತೆ ಒತ್ತಾಯಿಸಿ ಯುವಕನ ಅಪಹರಿಸಿ ಹಲ್ಲೆ, ಜೀವ ಬೆದರಿಕೆ
ಮಣಿಪಾಲ: ಗರುಡ ಗ್ಯಾಂಗ್ ನಡೆಸಿದ ಗ್ಯಾಂಗ್‌ವಾರ್ ಘಟನೆ ಮಾಸುವ ಮುನ್ನವೇ ಮತ್ತೊಂದು ದಾಂಧಲೆ, ಹಲ್ಲೆ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳೀಯರನ್ನು ಆತಂಕಗೊಳಿಸಿದೆ.
ಗಾಂಜಾ ಮಾರಾಟದ ಬಗ್ಗೆ ಹಫ್ತಾ ನೀಡುವಂತೆ ಒತ್ತಾಯಿಸಿ ಯುವಕನಿಗೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಉದ್ಯಾವರ ಕಂಪನ್‌ಬೆಟ್ಟು ನಿವಾಸಿ ಮೊಹಮ್ಮದ್ ಪರ್ವೇಜ್ ಉಮರ್ (25)ಗೆ ಪರಿಚಯದ ಪೈಝಲ್ ಕರೆ ಮಾಡಿ ನಿನ್ನ ಬಳಿ ಮಾತನಾಡಲು ಇದೆ ಎಂದು ಮಣಿಪಾಲಕ್ಕೆ ಕರೆಸಿಕೊಂಡಿದ್ದಾನೆ. ಪೈಝಲ್ ಜತೆಗೆ ದಾವುದ್ ಇಬ್ರಾಹಿಂ, ಇಸಾಕ್ ಮೂವರು ಜತೆಗೆ ಸೇರಿ ಪರ್ವೇಜ್ ಉಮರ್‌ನನ್ನು ಬಲತ್ಕಾರದಿಂದ ಕಾರಿನಲ್ಲಿ ಎಳೆದು ಹಾಕಿಕೊಂಡು ಅಪರಿಚಿತ ಜಾಗಕ್ಕೆ ಕೊಂಡೊಯ್ದಿದ್ದಾರೆ. ಅನಂತರ ಪರ್ವೇಜ್ ಉಮರ್‌ಗೆ ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯ ಎಂದು ನಮಗೆ ಮಾಹಿತಿ ಬಂದಿದ್ದು, ಮಣಿಪಾಲದಲ್ಲಿ ನೀನು ಗಾಂಜಾ ಮಾರಾಟ ಮಾಡಿದರೆ ನಮಗೆ ತಿಂಗಳ ಮಾಮೂಲಿ ಹಣ ಕೊಡಬೇಕು. ಇದಕ್ಕೆ ಒಪ್ಪದದ್ದಿರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ.
ಉಚ್ಚಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ ಪೂಜಾರಿ ಆಯ್ಕೆ – vishwanews24
ಜತೆಗೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಅನಂತರ ನೀವು ಹೇಳಿದ ಹಾಗೇ ಕೇಳುತ್ತೇನೆ ನನ್ನನ್ನು ಬಿಟ್ಟುಬಿಡಿ ಎಂದಿದ್ದಕ್ಕೆ ಬೆಳಗಿನ ಜಾವ ಅವರ ಮನೆ ಬಳಿ ಬಿಟ್ಟು ಹೋಗಿದ್ದಾರೆ. ಪೊಲೀಸರಿಗೆ ದೂರು ನೀಡಿದರೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಪರ್ವೇಜ್ ದೂರು ನೀಡಿದ್ದಾರೆ.
ಯುವಕ ಆಸ್ಪತ್ರೆಗೆ ದಾಖಲು
ತಂಡದಲ್ಲಿದ್ದ ದಾವೂದ್ ಇಬ್ರಾಹಿಂ ಎಂಬವನು ಪರ್ವೇಜ್‌ಗೆ ದೊಣ್ಣೆಯಿಂದ ಕಾಲಿಗೆ, ಕೈಗೆ, ಬೆನ್ನಿಗೆ ಹೊಡೆದಿದ್ದು, ಅದೇ ಕೋಲಿನಿಂದ ಇಸಾಕ್ ಬೆನ್ನಿಗೆ ಮತ್ತು ಕಾಲಿಗೆ ಹೊಡೆದಿದ್ದಾನೆ. ಫೈಝಲ್ ಕೈಯಿಂದ ಕೆನ್ನೆಗೆ, ಬೆನ್ನಿಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ಗಾಯಗೊಂಡ ಪರ್ವೇಜ್ ಉಮರ್ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಕುಂದಾಪುರ: ಶ್ರೀ ಮಾತಾ ಆಸ್ಪತ್ರೆಯ ಮಾಲೀಕ ಡಾ.ಸತೀಶ್ ಹೃದಯಾಘಾತದಿಂದ ನಿಧನ – vishwanews24
