ಮಣಿಪಾಲ: ಸ್ಕೂಟಿ ಹಾಗೂ ಬೈಕ್‌ ನಡುವೆ ಅಪಘಾತ ; ವಿದ್ಯಾರ್ಥಿನಿ ಮೃತ್ಯು – vishwanews24

Featured, ಉಡುಪಿ

ಮಣಿಪಾಲ: ಸ್ಕೂಟಿ ಹಾಗೂ ಬೈಕ್‌ ನಡುವೆ ಅಪಘಾತ ; ವಿದ್ಯಾರ್ಥಿನಿ ಮೃತ್ಯು

ಮಣಿಪಾಲ : ಸ್ಕೂಟಿ ಹಾಗೂ ಬೈಕ್‌ ನಡುವೆ ಅಪಘಾತ ನಡೆದ ಪರಿಣಾಮ ಬೈಕ್‌ನ ಸಹಸವಾರೆಯಾಗಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಹಿರಿಯಡಕದ ಸುಶ್ಮಿತಾ (19) ಎಂದು ಗುರುತಿಸಲಾಗಿದೆ.

ಕಾಯಿನ್‌ ಸರ್ಕಲ್‌ನಿಂದ ಸಿಂಡಿಕೇಟ್‌ ಸರ್ಕಲ್‌ಗೆ ಸ್ಕೂಟಿ ಮತ್ತು ಬೈಕ್ ಗಳೆರಡೂ ತೆರಳುತ್ತಿತ್ತು. ಈ ವೇಳೆ ಸ್ಕೂಟಿ ಸವಾರ ಸಿಗ್ನಲ್‌ ನೀಡದೆ ಒಮ್ಮೆಲೇ ಬಲಕ್ಕೆ ತಿರುಗಿದ್ದಾನೆ. ಪರಿಣಾಮ ಬೈಕ್‌ ಸವಾರ ಸ್ಕೂಟಿಗೆ ಢಿಕ್ಕಿ ಹೊಡೆದಿದ್ದಾನೆ.

ಉಡುಪಿ : ಪರಶುರಾಮ ಪ್ರತಿಮೆ ಅಸಲಿತನ, ಅಕ್ರಮ-ಅವ್ಯವಹಾರದ ಕುರಿತು ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ: ಮಂಜುನಾಥ ಭಂಡಾರಿ – vishwanews24

ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಸುಶ್ಮಿತಾ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಸುಶ್ಮಿತಾ ನಗರದ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply