ಮಣಿ ಮಾಲಾ ಧರಿಸಿ , ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ – Vishwanews24

Featured, ರಾಷ್ಟ್ರ ನ್ಯೂಸ್

ಮಣಿ ಮಾಲಾ ಧರಿಸಿ , ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ – Vishwanews24

ತಿರುವನಂತಪುರ (Vishwanews24): ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಎಲ್ಲ ಭಕ್ತರಂತೆ, ವ್ರತಧಾರಿಯಾಗಿ ಸಾಂಪ್ರದಾಯಿಕ “ಮಣಿ ಮಾಲಾ” ಧರಿಸಿ “ಇರುಮುಡಿ” ಯನ್ನು ತಲೆಯ ಮೇಲೆ ಹೊತ್ತುಕೊಂಡು 5 ಕಿ.ಮೀ ಚಾರಣ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜಭವನ ” ಗೌರವಾನ್ವಿತ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್ ಭಗವಾನ್ ಅಯ್ಯಪ್ಪನ ವಾಸಸ್ಥಾನವಾದ ಶಬರಿಮಲೆಯ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಶಬರಿಮಲೆ ದೇವಸ್ಥಾನವೂ ಎಲ್ಲಾ ಧರ್ಮದ ಭಕ್ತರನ್ನು ಆಕರ್ಷಿಸುತ್ತದೆ. ಶಬರಿಮಲೆಯ ಸುತ್ತುವರೆದಿರುವ ವಾವರ ಸ್ವಾಮಿಯ ದೇವಾಲಯವು ಕೋಮು ಸೌಹಾರ್ದತೆ ಮತ್ತು ಏಕತೆಗೆ ಉದಾಹರಣೆಯಾಗಿದೆ” ಎಂದಿದೆ.

ಮಂಗಳೂರು : ನೈಟ್‌ ಕರ್ಫ್ಯೂ ನಿಯಮ ಉಲ್ಲಂಘನೆ : 68 ವಾಹನಗಳ ಮೇಲೆ ಪ್ರಕರಣ ದಾಖಲು -Vishwanews24