ಮತಕ್ಕೋಸ್ಕರ ಹಿಂದೂ ಸಮಾಜವನ್ನೇ ನಾಶ ಮಾಡುವ ಕೆಲಸ ಆಗುತ್ತಿದೆ: ಕಲ್ಲಡ್ಕ ಪ್ರಭಾಕರ ಭಟ್ – Vishwanews24
ಸರ್ಕಾರ ನೀಡುವ ಸೌಲಭ್ಯದ ಲಾಭ ಕೇವಲ ಒಂದು ಸಮುದಾಯಕ್ಕೆ ತಲುಪುತ್ತಿದೆ ಮತಕ್ಕೋಸ್ಕರ ಹಿಂದೂ ಸಮಾಜವನ್ನೇ ನಾಶ ಮಾಡುವ ಕೆಲಸ ಆಗುತ್ತಿದೆ: ಕಲ್ಲಡ್ಕ ಪ್ರಭಾಕರ ಭಟ್
ಶಿರಸಿ :ಸರ್ಕಾರ ನೀಡುವ ಸೌಲಭ್ಯದ ಲಾಭ ಕೇವಲ ಒಂದು ಸಮುದಾಯಕ್ಕೆ ತಲುಪುತ್ತಿದೆ. ಮತಕ್ಕೋಸ್ಕರ ಹಿಂದೂ ಸಮಾಜವನ್ನೇ ನಾಶ ಮಾಡುವ ಕೆಲಸ ಆಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರ ಕಾರ್ಯಕಾರಿಣಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಹೇಳಿದ್ದಾರೆ.
ಈ ಬಗ್ಗೆ ಯುಗಾದಿ ಉತ್ಸವ ಸಮಿತಿಯ ಬೆಳ್ಳಿ ಹಬ್ಬ ಹಾಗೂ ಶೋಭನ ನಾಮ ಸಂವತ್ಸರದ ಯುಗಾದಿ ಉತ್ಸವದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನಮ್ಮ ಪರಂಪರೆ ಋಷಿ ಪರಂಪರೆ. ಹಿಂದೂ ಸಮಾಜದವರು ಪ್ರಕೃತಿ ದೇವರು ಅಂತ ತಿಳಿದವರು. ಪ್ರಕೃತಿಯ ಬದುಕಿನಲ್ಲಿ ಸಂತೋಷ ಉಂಟಾದಾಗ ಆ ಸಂದರ್ಭ ನಮ್ಮ ಹೊಸ ವರ್ಷ. ಯುಗಾದಿಗೆ ಹೂವು ಅರಳುತ್ತದೆ. ಎಲೆ ಚಿಗುರುತ್ತದೆ ಅದೇ ಹೊಸ ವರ್ಷ ಎಂದರು.
ಲವ್ ಜಿಹಾದ್ ನಂತ ಪ್ರಕರಣಗಳು ಹೆಚ್ಚುತ್ತಿವೆ. ಮೋಸ ವಂಚನೆ ನಡೆದಿದೆ. ಇವೆಲ್ಲವೂ ನಡೆಯುವುದು ಹಿಂದೂ ಸಮಾಜದವರ ಮೇಲೆ. ಸರ್ಕಾರ ನೀಡುವ ಸೌಲಭ್ಯದ ಲಾಭ ಕೇವಲ ಒಂದು ಸಮುದಾಯಕ್ಕೆ ತಲುಪುತ್ತಿದೆ. ಸೌಲಭ್ಯಗಳ ಜೊತೆ ಜನ ಸಂಖ್ಯೆ ಏರುತ್ತಿದೆ. ಜನ ಸಂಖ್ಯೆ ಏರಿದಂತೆ ಈ ನೆಲದ ಭೂಮಿ ಕೂಡ ಅವರದ್ದಾಗುತ್ತಿದೆ ಎಂದು ಹೇಳಿದರು.
ಬೆಳ್ತಂಗಡಿ : ಕುಟುಂಬಸ್ಥರ ಜೊತೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಯುವತಿ ನಾಪತ್ತೆ – Vishwanews24
ಈ ಮೊದಲೇ ಹಿಂದುಗಳ ಜನ ಸಂಖ್ಯೆ ಕುಸಿದಿದೆ. ಇನ್ನೊಂದು ಕಡೆ ಹಿಂದೂ ಸಮಾಜದ ಮತಾಂತರ ಕಾರ್ಯ ಕೂಡ ನಡೆದಿದೆ ಎಂದ ಅವರು, ಗುಣಕ್ಕೆ ಮರುಳಾಗಬೇಕೇ ಹೊರತು ಹಣಕ್ಕಲ್ಲ. ಹಿಂದೂ ಸಮಾಜ ಜಗತ್ತಿಕೋಸ್ಕರ ಬದುಕಬೇಕಿದೆ. ಭಗವದ್ಗೀತೆ ಎಲ್ಲ ಮಕ್ಕಳಿಗೂ ಹೇಳಿಕೊಡಬೇಕು. ಈ ದೇಶದ ಮಣ್ಣಿನ ಸುವಾಸನೆ ಭಗವದ್ಗೀತೆ ವಿದೇಶದಲ್ಲಿ ಕೂಡ ಗೀತೆ ಕಲಿಸಬೇಕು. ಸ್ವರ್ಣವಲ್ಲೀ ಸಂಸ್ಥಾನ ಗೀತಾಭಿಯಾನ ನಡೆಸುವದು ಶ್ರೇಷ್ಠ ಕೆಲಸ, ಪ್ರತೀ ಮನೆಯಲ್ಲಿ ಮಕ್ಕಳಿಗೆ ಗೀತ ಓದಿಸಬೇಕು ಎಂದರು.
