ಮತದಾರರು ನನ್ನ ಕೊನೆಗಾಲದಲ್ಲಿ ನನಗೆ ಮತ ನೀಡಿ ಜೆಡಿಎಸ್ ಅಧಿಕಾರಕ್ಕೆ ಬರಲು ಸಹಕರಿಸಿ : ಎಚ್‌ಡಿಡಿ ಮನವಿ – Vishwanews24
ಮತದಾರರು ನನ್ನ ಕೊನೆಗಾಲದಲ್ಲಿ ನನಗೆ ಮತ ನೀಡಿ ಜೆಡಿಎಸ್ ಅಧಿಕಾರಕ್ಕೆ ಬರಲು ಸಹಕರಿಸಿ : ಎಚ್‌ಡಿಡಿ ಮನವಿ – Vishwanews24
ಚಿಕ್ಕಮಗಳೂರು : ಕೊನೆಗಾಲದಲ್ಲಿ ಈ ದೇವೇಗೌಡರಿಗೆ ನಿಮ್ಮ ಒಂದು ಮತವನ್ನು ನೀಡಿ. ಆ ಮೂಲಕ ಜೆಡಿಎಸ್‌ನ್ನು ಅಧಿಕಾರಕ್ಕೆ ತನ್ನಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮನವಿ ಮಾಡಿದರು.
ಒಕ್ಕಲಿಗರ ಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಜೆಡಿಎಸ್ ಮರಳಿ ಅಧಿಕಾರಕ್ಕೇರುವುದು ನಮ್ಮ ಸಂಕಲ್ಪ. ಕಾರ್ಯಕರ್ತರಿಂದಲೇ ಪಕ್ಷ ಬಲವರ್ಧನೆ ಸಾಧ್ಯ. ಪಕ್ಷ ಕಟ್ಟಿ, ಅಧಿಕಾರ ಪಡೆಯುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಿದರು.
ಪಕ್ಷದಲ್ಲಿ ಎಲ್ಲರಿಗಿಂತ ಕಾರ್ಯಕರ್ತರು ಮುಖ್ಯ. ರಾಜಕೀಯದಲ್ಲಿ ಸುದೀರ್ಘ ಪಯಣದ ದುಡಿತ ನನ್ನದು. ಪಕ್ಷಾಂತರ ಮಾಡದೇ ಒಂದೇ ಪಕ್ಷದಲ್ಲಿ ನಿಷ್ಠೆಯಿಂದ ದುಡಿದಿದ್ದೇನೆ. ಪಕ್ಷ ಸದೃಢಗೊಳಿಸುವ ಶಕ್ತಿ ಈಗಲೂ ನನ್ನಲ್ಲಿದೆ. ಮತದಾರರು ನನ್ನ ಕೊನೆಗಾಲದಲ್ಲಿ ನನಗೆ ಮತ ನೀಡಿ ಜೆಡಿಎಸ್ ಅಧಿಕಾರಕ್ಕೆ ಬರಲು ಸಹಕರಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ, ಮಾಜಿ ಶಾಸಕ ವೈ.ಎಸ್.ವಿ. ದತ್ತ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜಿತ್ ಕುಮಾರ್, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಮುಖಂಡರಾದ ಮಂಜಪ್ಪ, ವೆಂಕಟೇಶ್ ಹೊಲಗದ್ದೆ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
