ಮತ್ತೊಂದು ಮೆಚ್ಚುಗೆಯ ಕೆಲಸ ಮಾಡಿದ ಎಸ್​ಪಿ ಅಣ್ಣಾಮಲೈ ವೃದ್ಧಾಶ್ರಮಕ್ಕೆ ಭೇಟಿ

Featured, ಜಿಲ್ಲೆ

ಚಿಕ್ಕಮಗಳೂರು: ನೆಚ್ಚಿನ ವ್ಯಕ್ತಿವೊಬ್ಬರನ್ನು ನೋಡಬೇಕೆಂದು ಪಟ್ಟು ಹಿಡಿದಿದ್ದ ವೃದ್ಧರ ಆಸೆಯನ್ನು ಈಡೇರಿಸಿ ಮಾನವೀಯತೆ ಮೆರೆದಿದ್ದಾರೆ ಚಿಕ್ಕಮಗಳೂರಿನ ಎಸ್ಪಿ ಅಣ್ಣಾಮಲೈ.

ಇಂದು ದಿಢೀರ್​ನೆ ವೃದ್ಧಾಶ್ರಮಕ್ಕೆ ಭೇಟಿ ನೀಡುವ ಮೂಲಕ ವೃದ್ಧರ ಕುಶಲೋಪರಿ ವಿಚಾರಿಸಿದರು. ನೆಚ್ಚಿನ ವ್ಯಕ್ತಿಯನ್ನು ಕಂಡು ವೃದ್ಧರು ಸಹ ಸಂತೋಷಗೊಂಡು ಕಣ್ಣೀರಿಟ್ಟು ಅಳಲು ತೋಡಿಕೊಂಡರು.

ಕಳೆದೊಂದು ವರ್ಷದಿಂದ ಅಣ್ಣಾಮಲೈ ಅವರನ್ನು ನೋಡಲೇಬೇಕೆಂದು ಚಿಕ್ಕಮಗಳೂರಿನ ಅನ್ನಪೂರ್ಣೇಶ್ವರಿ ವೃದ್ಧಾಶ್ರಮದಲ್ಲಿ ಈ ಹಿರಿಯ ಜೀವಗಳು ಪಟ್ಟು ಹಿಡಿದಿದ್ದರು. ಈಗ ಅವರ ಆಸೆಗೆ ಸಿಂಗಂ ಸ್ಪಂದಿಸಿದ್ದಾರೆ.