ಮಧ್ಯಪ್ರದೇಶ : ಸೇತುವೆ ಮೇಲಿಂದ ನಾಲೆಗೆ ಉರುಳಿದ ಬಸ್‌ : 37 ಜನ ಸಾವು -Vishwanews24

Featured, ರಾಷ್ಟ್ರ ನ್ಯೂಸ್

ಮಧ್ಯಪ್ರದೇಶ : ಸೇತುವೆ ಮೇಲಿಂದ ನಾಲೆಗೆ ಉರುಳಿದ ಬಸ್‌ : 37 ಜನ ಸಾವು -Vishwanews24

ಭೋಪಾಲ್: ಸೇತುವೆ ಮೇಲಿಂದ ಕಾಲುವೆಗೆ ಬಸ್‌ ಉರುಳಿಬಿದ್ದು, 16 ಮಹಿಳೆಯರು ಸೇರಿದಂತೆ 37 ಮಂದಿ ಸಾವನ್ನಪ್ಪಿದ ದುರ್ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಟ್ನಾ ಗ್ರಾಮದ ಬಳಿ ಇಂದು ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ಏಳು ಜನ ಈಜಿಕೊಂಡು ದಡ ಸೇರಿ ಉಳಿದ 37 ಶವಗಳನ್ನು ನಾಲೆಯಿಂದ ಹೊರತೆಗೆಯಲಾಗಿದೆ ಎಂದು ರೆವಾ ವಲಯದ ಐಜಿಪಿ ಉಮೇಶ್ ಜೋಗಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ಮಂಗಳವಾರ ಬೆಳಿಗ್ಗೆ 8.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬಸ್‌ನಲ್ಲಿ ಕನಿಷ್ಠ 44 ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.

ಘಟನೆ ನಡೆದ ಬಳಿಕ ಏಳು ಮಂದಿ ನಾಲೆಯಲ್ಲಿ ಈಜುತ್ತಾ ದಡ ಸೇರುತ್ತಿರುವುದು ಕಾಣುತ್ತಿದ್ದು, ಉಳಿದವರು ಕಣ್ಮರೆಯಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಫಾಸ್ಟ್ಯಾಗ್ ಕಡ್ಡಾಯ : ಸಾಸ್ತಾನ ಟೋಲ್‌ ಗೇಟ್‌ನ ಮುಂದೆ ತಮ್ಮ ವಾಹನ ಇಟ್ಟು ಸ್ಥಳೀಯರ ಪ್ರತಿಭಟನೆ -Vishwanews24