ಮಧ್ಯರಾತ್ರಿ ತ್ರಿವರ್ಣ ಧ್ವಜಹಾರಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಮೂಳೂರು ಹಿಂದೂ ರಕ್ಷಾ ವೆಲ್ ಫೇರ್ ಟ್ರಸ್ಟ್ ಸದಸ್ಯರು -Vishwanews24

ಮೂಳೂರು : ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು ವತಿಯಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ಮಧ್ಯರಾತ್ರಿ ಸಂಸ್ಥೆಯ ಸದಸ್ಯ ರಾಘವೀರ್ ಕೋಟ್ಯಾನ್ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.
ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟ ಕ್ರಾಂತಿಕಾರಿಗಳಿಗೆ , ಮಳೆ ಬಿಸಿಲು , ಚಳಿಯನ್ನು ಲೆಕ್ಕಿಸದೆ ನಮ್ಮ ದೇಶ ಕಾಯುವ ನಮ್ಮ ವೀರ ಯೋಧರಿಗೆ ನಮನ ಸಲ್ಲಿಸಲಾಯಿತು.
ಇದೇ ಸಂದರ್ಭ ಟ್ರಸ್ಟ್ ನ ಉಪಾಧ್ಯಕ್ಷರಾದ ಜಿತೇಶ್ ಕುಮಾರ್,ಟ್ರಸ್ಟಿ ಪ್ರತೀಕ್ ಸುವರ್ಣ, ನಾಗೇಶ್ ಅಮೀನ್,ಸದಸ್ಯರಾದ ಸಂತೋಷ್ ಸಾಲ್ಯನ್ ,ನಾಗರಾಜ್ ಪೂಜಾರಿ, ಸುಖೇಶ್ ಡಿ ಮೂಳೂರು, ವಿಪಿನ್ ಮೊಗವೀರ, ಮಧುಕಿರಣ್ ಶ್ರೀಯನ್ ,ಪ್ರಕಾಶ್ ಆಚಾರ್ಯ, ಜಿತೇಶ್,ನಿಖಿಲ್ ,ಮನೋಜ್ ಅಮೀನ್,ಕೋಶಾಧಿಕಾರಿ ಸಂತೋಷ್ ಪುತ್ರನ್, ಕಾರ್ಯದರ್ಶಿ ಧೀರೇಶ್ ಡಿ ಮೂಳೂರು ಹಾಗೂ ಇತರರು ಉಪಸ್ಥಿತರಿದ್ದರು.
