ಮಮತಾ ಬ್ಯಾನರ್ಜಿ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ, ಈ ಕೂಡಲೇ ಅವರು ಹಿಂದೂ ಧರ್ಮವನ್ನು ಬಿಟ್ಟು ತೊಲಗಬೇಕು : ಬಿಜೆಪಿ ಸಚಿವ

Featured

ಅಲ್ವಾರ್ : ರಾಜಸ್ಥಾನದ ಬಿಜೆಪಿ ಸಚಿವ ಜಸ್ವಂತ್ ಸಿಂಗ್ ಯಾದವ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.ಮಮತಾ ಬ್ಯಾನರ್ಜಿಯವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಈ ಕೂಡಲೇ ಅವರು ಹಿಂದು ಧರ್ಮವನ್ನು ಬಿಟ್ಟು ತೊಲಗಬೇಕು ಎಂದು ಕಿಡಿಕಾರಿದ್ದಾರೆ.

ಇತ್ತೀಚೆಗೆ ಮಮತಾ ಬ್ಯಾನರ್ಜಿಯವರು ಬಲಪಂಥೀಯ ಸಂಘಟನೆಗಳ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಒಬ್ಬ ವ್ಯಕ್ತಿಗೆ ಇರಬೇಕಾದ ಸಾಮಾನ್ಯ ಜ್ಞಾನ ,ದೇಶದ ಮೇಲಿನ ಪ್ರೀತಿ ಎಲ್ಲಾ ವಿಚಾರಗಳು ಮಮತಾ ಬ್ಯಾನರ್ಜಿಯವರಿಗೆ ಇಲ್ಲವಾಗಿದೆ. ಸುಖಾ ಸುಮ್ಮನೆ ಹಿಂದು ಸಂಘಟನೆಗಳು ತೀವ್ರವಾದಿಗಳೆಂದು ಹೇಳಿಕೆ ಮಮತಾ ಬ್ಯಾನರ್ಜಿಯವರು ನೀಡಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಈ ಕೂಡಲೇ ಇಂದು ಧರ್ಮವನ್ನು ಬಿಟ್ಟು ಹೋಗಬೇಕು ಎಂದು ಅವರು ಹೇಳಿದ್ದಾರೆ.ಮಮತಾ ಬ್ಯಾನರ್ಜಿಯವರು ಜುಲೈ21 ರಂದು ತೃಣಮೂಲ ಕಾಂಗ್ರೆಸ್ ಸಮಾವೇಶದ ಬೃಹತ್ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ ಸಾಮೂಹಿಕ ಹಲ್ಲೆ ವಿರುದ್ಧ ಕಿಡಿಕಾರಿ ಹಿಂದೂ ಸಂಘಟನೆಗಳು ತೀವ್ರಗಾಮಿಗಳು ಎಂದು ಹೇಳಿಕೆ ನೀಡಿದ್ದಾರೆ.