ಮಲ್ಪೆ : ಮೀನುಗಾರರ ಬೇಡಿಕೆಯ ಈಡೇರಿಕೆ ಬಗ್ಗೆ ಪರಿಶೀಲಿಸುವೆ: ಸಿಎಂ ಭರವಸೆ – vishwanews24

Featured, ಉಡುಪಿ

ಮಲ್ಪೆ : ಮೀನುಗಾರರ ಬೇಡಿಕೆಯ ಈಡೇರಿಕೆ ಬಗ್ಗೆ ಪರಿಶೀಲಿಸುವೆ: ಸಿಎಂ ಭರವಸೆ

ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯಿಂದ ಮನವಿ

ಮಲ್ಪೆ: ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಮೀನುಗಾರಿಕೆಗೆ ಉತ್ತೇಜನ ನೀಡಲು ಪೂರಕವಾಗಿ ಮೀನುಗಾರರ ಬೇಡಿಕೆಯ ಈಡೇರಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಬಂದರು ಅಭಿವೃದ್ಧಿ ಮತ್ತು ಮೀನು ಗಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಈಡೇರಿಸುವಂತೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ ಮತ್ತು ಕಾಂಗ್ರೆಸ್‌ ನಾಯಕ ಪ್ರಸಾದ್‌ರಾಜ್‌ ಕಾಂಚನ್‌ ನೇತೃತ್ವದಲ್ಲಿ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯು ಬುಧವಾರ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಬಜೆಟ್‌ ಪೂರ್ವವಾಗಿ ಭೇಟಿ ಮಾಡಿ ಮನವಿ ನೀಡಿದರು.

ವಿವಿಧ ಬೇಡಿಕೆಗಳು

ಯಾಂತ್ರಿಕ ಬೋಟಿನವರಿಗೆ ವಾರ್ಷಿಕ ಕೋಟದೊಂದಿಗೆ ದಿನವಹಿ 500 ಲೀ. ನಂತೆ ಡೀಸೆಲ್‌, ಮಹಿಳಾ ಮೀನುಗಾರರಿಗೆ ಬಡ್ಡಿ ರಹಿತ

ಸಾಲ, ಮೊದಲಾದ ಬೇಡಿಕೆಗಳನ್ನು ಸಿಎಂ ಮುಂದಿರಿಸಲಾಯಿತು.

ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಉಪಾಧ್ಯಕ್ಷ ಮೋಹನ್‌ ಬೆಂಗ್ರೆ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ್‌ ಕೆ. ಸುವರ್ಣ, ಮಂಗಳೂರು ಟ್ರಾಲ್‌ ಬೋಟು ಮೀನುಗಾರರ ಸಂಘದ ಅಧ್ಯಕ್ಷ ಚೇತನ್‌, ಪ್ರಮುಖರಾದ ಮನೋಹರ್‌ ಬೋಳೂರು, ಸೋಮನಾಥ್‌ ಕಾಂಚನ್‌, ಕಿಶೋರ್‌ ಪಡುಕರೆ, ವಿನಯ್‌ ಕರ್ಕೇರ, ರಾಜೇಶ್‌ ಪುತ್ರನ್‌, ಇಬ್ರಾಹಿಂ ಬೆಂಗ್ರೆ ಮೊದಲಾದವರಿದ್ದರು.

Leave a Reply