ಮಲ್ಪೆ : ಯುವಕ ನಾಪತ್ತೆ; ದೂರು ದಾಖಲು – vishwanews24
ಮಲ್ಪೆ : ಯುವಕ ನಾಪತ್ತೆ; ದೂರು ದಾಖಲು
ಮಲ್ಪೆ: ಊರಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದ ಕೊಪ್ಪಳ ಜಿಲ್ಲೆಯ ಕನಕಪ್ಪ (20) ಎಂಬ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ 4 ವರ್ಷದಿಂದ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬೋಟ್ನಲ್ಲಿ ಮೀನು ಖಾಲಿ ಮಾಡುವ ಕೆಲಸ ಮಾಡಿಕೊಂಡಿದ್ದ. ನ. 23ರಂದು ಚಿಕ್ಕಪ್ಪ ಉಮೇಶ್ ಅವರಲ್ಲಿ 5 ಸಾವಿರ ರೂ. ಹಣವನ್ನು ಪಡೆದುಕೊಂಡು ಮನೆಗೆ ಹೋಗುವುದಾಗಿ ತೆರಳಿದ್ದರು. ಬಳಿಕ ಮನೆಯವರಲ್ಲಿ ವಿಚಾರಿಸಿದಾಗ ಆತ ಮನೆಗೆ ಬಂದಿಲ್ಲ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ : ಸ್ನಾನಕ್ಕೆ ಹೋದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನೀರುಪಾಲು – vishwanews24
