ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಿಂದ ಕರ್ನಾಟಕಕ್ಕೆ ಒಳ್ಳೆಯದಾಗಲಿದೆ; ಇಡೀ ಭಾರತದಲ್ಲಿ ಪರಿಣಾಮ ಆಗಲಿದೆ : ಡಿಕೆಶಿ ಭರವಸೆ – Vishwanews24
ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಿಂದ ಕರ್ನಾಟಕಕ್ಕೆ ಒಳ್ಳೆಯದಾಗಲಿದೆ; ಇಡೀ ಭಾರತದಲ್ಲಿ ಪರಿಣಾಮ ಆಗಲಿದೆ : ಡಿಕೆಶಿ ಭರವಸೆ
ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯುತ್ತಿದೆ. ಸದಸ್ಯತ್ವ ನೋಂದಣಿಯ ಅರಿವಯ ಈಗ ಆಗುತ್ತಿದೆ. ಕೆಲವರು ತಮ್ಮ ಕಾರ್ಯಕರ್ತರಿಗೆ ಮತದಾನದ ಹಕ್ಕು ನೀಡಿದ್ದು, ಯಾರ ಮೇಲೆಯೂ ಒತ್ತಡ ಇಲ್ಲದೆ ಮತದಾನ ನಡೆಯಲಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಪಕ್ಷದ ನಾಯಕತ್ವ ಸ್ಥಾನಕ್ಕೆ ಹಿರಿಯ ನಾಯಕರು ಸ್ಪರ್ಧೆ ಮಾಡಿದ್ದಾರೆ. ಇದರಿಂದ ಕರ್ನಾಟಕ್ಕೆ ಒಳ್ಳೆಯದಾಗಲಿದೆ. ಮಲ್ಲಿಕಾರ್ಜುನ ಖರ್ಗೆಯವರ ಆಯ್ಕೆ ಇಡೀ ಭಾರತದಲ್ಲಿ ಪರಿಣಾಮ ಆಗಲಿದೆ. ನಾನೂ ಕೂಡ ಅಧ್ಯಕ್ಷ ಸ್ಥಾನದಲ್ಲಿ ಗಾಂಧಿ ಕುಟುಂಬ ಇರಬೇಕೆಂದು ಒತ್ತಾಯ ಮಾಡಿದ್ದೆ. ಆದರೆ ಅವರೇ ಬೇರೆಯವರಿಗೆ ಅವಕಾಶ ಕೊಡೋಣ ಎಂದಿದ್ದಾರೆ ಎಂದು ಹೇಳಿದರು.
ನಾನು ಕೂಡ ಕೆಲ ಸಂದರ್ಭದಲ್ಲಿ ಪರಮೇಶ್ವರ್, ಅಲ್ಲಂ ವೀರಭದ್ರಪ್ಪ ಅವರ ಸಲಹೆ ಪಡೆಯುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರಿಂದಲೂ ಸಲಹೆ ಕೇಳ್ತಿರುತ್ತೇನೆ. ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗುವಾಗ ಸಲಹೆ ಅಗತ್ಯ, ಇದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
