ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ರಾಶಿಪೂಜಾ ಮಹೋತ್ಸವ ಸಂಪನ್ನ
ಕಾಪು : ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಬುಧವಾರ 8ನೇ ವರ್ಷದ ರಾಶಿಪೂಜಾ ಮಹೋತ್ಸವ ಸಂಪನ್ನಗೊಂಡಿತ್ತು. ಬುಧವಾರ ಸೂರ್ಯೋದಯದಿಂದ ಗುರುವಾರ ಬೆಳಗ್ಗಿನ ಜಾವದ ಸೂರ್ಯೋದಯದವರೆಗೆ ಸತತವಾಗಿ 24 ಗಂಟೆಗಳ ಕಾಲ ಜರುಗಿದ ಈ ಪೂಜಾ ಮಹೋತ್ಸವ ವಿಶೇಷವಾಗಿ ನೃತ್ಯ, ಸಂಗೀತ, ವಾದ್ಯ, ಭಜನೆ ಕೀರ್ತನೆ ಸಹಿತ ಅಷ್ಟಾವಧಾನ ಪೂಜೆಯೊಂದಿಗೆ ಸಂಪನ್ನಗೊಂಡಿತು.
ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಶ್ರೀಶ ತಂತ್ರಿ ನೇತೃತ್ವದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಪಂಜ ಭಾಸ್ಕರ್ ಭಟ್ ಉಪಸ್ಥಿತಿಯಲ್ಲಿ ನಡೆದ ಮಹೋತ್ಸವದಲ್ಲಿ ವೈದಿಕರಾದ ಶ್ರೀನಿವಾಸ ತಂತ್ರಿ ಹಾಗೂ ಅರ್ಚಕ ವರ್ಗದವರು ರಾಶಿ ಕಲಶಾವಧಿ ವಾಸ ಭಾರತೀ ಪೂಜೆ, ಬಲಿ ಸಹಿತ ನಾನಾ ಧಾರ್ಮಿಕ ಅನುಷ್ಠಾನ ನೆರವೇರಿಸಿದರು. ಎಲ್ಲ ೧೨ ರಾಶಿಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ನಡೆದ ಪೂಜೆಯಲ್ಲಿ ಪರಿಸರದ ಗಣ್ಯರು ಮತ್ತು ಸಮಾಜದ ಸಂಘಟನೆಗಳು ಸೇವಾಕರ್ತರಾಗಿದ್ದರು. ಅನೇಕ ಗಣ್ಯರು ಭೇಡಿ ನೀಡಿ ದೇವರ ದರ್ಶನ ಪಡೆದು ಮಹೋತ್ಸವದಲ್ಲಿ ಪಾಲ್ಗೋಂಡರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ಎಂ. ಬಂಗೇರ, ಕಾರ್ಯನಿರ್ವಹಣಾಧಿಕಾರಿ ರವಿಶಂಕರ್ ಕೆ., ರಾಶಿಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ದೇವಳದ ಗೌರವ ಸಲಹೆಗಾರನಾದ ಕೆ.ಪಿ.ಆಚಾರ್ಯ, ರಾಶಿಪೂಜಾ ಸಮಿತಿ ಸಲಹೆಗಾರರಾದ ಶಶಿಧರ ಕೆ. ಶೆಟ್ಟಿ ಎರ್ಮಾಳ್, ಡಾ. ಕೆ. ಪ್ರಭಾಕರ ಶೆಟ್ಟಿ, ರವಿ ಎಸ್. ಶೆಟ್ಟಿ, ಎಂ. ಶಶಿಧರ ಶೆಟ್ಟಿ , ಶ್ರೀನಿವಾಸ ತಂತ್ರಿ,ಸಮಿತಿ ಕಾರ್ಯದರ್ಶಿ ರತ್ನಾಕರ್ ಹೆಗ್ಡೆ ಕಲ್ಯಾ, ಕೋಶಾಧಿಕಾರಿ ಶ್ರೀಕರ ಶೆಟ್ಟಿ ಕಲ್ಯಾ, ವ್ಯವಸ್ಥಾಪನಾ ಸಮಿತಿ, ರಾಶಿ ಪೂಜಾ ಮಹೋತ್ಸವ ಸಮಿತಿ, ದೇವಳದ ಜೀರ್ಣೋದ್ದಾರ ಸಮಿತಿ, ಪದಾಧಿಕಾರಿಗಳು ಮತ್ತು ಸದಸ್ಯರು, ಕಾಪು ಸಾವಿರ ಸೀಮೆಯ ಹತ್ತು ಸಮಸ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
photos by: Rupam kaup
