ಮಹಾ ಮಳೆಗೆ ನಲುಗಿದ ಗುಜರಾತ್: ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ – Vishwanews24

Featured, ರಾಷ್ಟ್ರ ನ್ಯೂಸ್

ಮಹಾ ಮಳೆಗೆ ನಲುಗಿದ ಗುಜರಾತ್: ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

ಗುಜರಾತ್: ಗುಜರಾತ್‌ನಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಧಾರಾಕಾರ ಮಳೆಯಿಂದಾಗಿ ರಾಜ್‌ಕೋಟ್, ಸೂರತ್ ಮತ್ತು ಗಿರ್ ಸೋಮನಾಥ್ ಜಿಲ್ಲೆಗಳಲ್ಲಿ ತೀವ್ರ ಜಲಾವೃತವಾಗಿದ್ದು, ಜನ ಜೀವ ಅಸ್ತವ್ಯಸ್ತಗೊಂಡಿದೆ.

ರಾಜ್ಯದಲ್ಲಿ 300 ಮಿಮೀ ಮಳೆ ಸುರಿದಿದ್ದು, 70 ಜನರನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ ರಸ್ತೆಗಳು ಜಲಾವೃತಗೊಂಡಿದ್ದು ಕಾರುಗಳು ಮುಳುಗಡೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಹರಿದಾಡುತ್ತಿದ್ದು ನಗರ ತುಂಬಾ ಪ್ರವಾಹದ ನೀರು ತುಂಬು ಕಾರುಗಳು ಮುಳುಗಡೆಯಾಗಿರುವುದನ್ನು ಕಾಣಬಹುದು.

ಹವಾಮಾನ ಇಲಾಖೆ ಸೌರಾಷ್ಟ್ರದ ಕೆಲವು ಜಿಲ್ಲೆಗಳು ಮತ್ತು ದಕ್ಷಿಣ ಗುಜರಾತ್ ಪ್ರದೇಶಗಳಲ್ಲಿ ಮುಂಬರುವ ದಿನಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.

ಮಂಗಳೂರು: ಡಿವೈಡರ್ ಗೆ ದ್ವಿಚಕ್ರ ವಾಹನ‌ ಡಿಕ್ಕಿ, ಕಾಲೇಜು ವಿದ್ಯಾರ್ಥಿ ಮೃತ್ಯು – Vishwanews24

Leave a Reply