ಮಾಡರ್ನ್ ರೈತ ಶಶಿಗೆ BIG BOSS ಕಿರೀಟ – Vishwanews24

Featured, ರಾಜ್ಯ ನ್ಯೂಸ್, ಸಿನಿಮಾ

ಬೆಂಗಳೂರು: ಕಿಚ್ಚ ಸುದೀಪ್‌ ನಡೆಸಿಕೊಡುವ,ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗುವ  ಕನ್ನಡದ ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 6 ಗ್ರ್ಯಾಂಡ್‌ ಫಿನಾಲೆ ಭಾನುವಾರ ರಾತ್ರಿ ಅಂತ್ಯವಾಗಿದ್ದು, ಮಾಡರ್ನ್ ರೈತ ಖ್ಯಾತಿಯ ಶಶಿ ಅವರು ವಿನ್ನರ್‌ ಆಗಿದ್ದಾರೆ.

ಫೈನಲ್‌ನಲ್ಲಿ  ನವೀನ್‌ ಸಜ್ಜು, ಶಶಿ ಮತ್ತು ಕವಿತಾ ಗೌಡ ಅವರ ನಡುವೆ ತೀವ್ರ ಪೈಪೋಟಿ ಇತ್ತು. ಕವಿತಾ ಗೌಡ ಅವರು ಮೊದಲು ಎಲಿಮಿನೇಟ್‌ ಆದರೆ , ನವೀನ್‌ ಫೈನಲ್‌ನಲ್ಲಿ ತೀವ್ರ ಸ್ಪರ್ಧೆ ಒಡ್ಡಿ ರನ್ನರ್‌ ಅಪ್‌ ಆದರು. ಅಂತಿಮವಾಗಿ ಸುದೀಪ್‌ ಅವರು ಶಶಿ ಅವರ ಕೈ ಎತ್ತುವ ಮೂಲಕ ಕೂತುಹಲಕ್ಕೆ ಅಂತ್ಯ ಹಾಡಿದರು.

ಸೀಸನ್ -6ರ 12ನೇ ಕಂಟೆಸ್ಟೆಂಟ್ ಆಗಿ ಶಶಿ ಬಿಗ್‍ಬಾಸ್ ಮನೆಯೊಳಗೆ ಎಂಟ್ರಿ ನೀಡಿದ್ದರು. ಮಾಡರ್ನ್ ರೈತ ಅಂತಾನೇ ಫೇಮಸ್ ಆಗಿದ್ದ ಇವರು, ಎಲ್ಲಾ ಟಾಸ್ಕ್‍ಗಳನ್ನ ಕೂಡ ಚೆನ್ನಾಗಿಯೇ ಮಾಡಿದ್ದರು. ಹೀಗಾಗಿ, ರೈತನೊಬ್ಬ ಮೊದಲ ಬಾರಿಗೆ ಬಿಗ್ ಬಾಸ್ ಗೆಲ್ತಾನೆ ಅನ್ನೋ ಮಾತು ಕೇಳಿ ಬಂದಿತ್ತು. ಅದರಂತೆ ಶಶಿಕುಮಾರ್ ಬಿಗ್‍ಬಾಸ್ ಸೀಜನ್ -6 ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.

ಚಿಕ್ಕಬಳ್ಳಾಪುರದ ಚಿಂತಾಮಣಿಯವರಾದ ಶಶಿ ಆಕರ್ಷಕ ರೂಪು ಹೊಂದಿರುವ ಇವರು ಮಾಡರ್ನ್ ರೈತ, ಕೃಷಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. 50 ಲಕ್ಷ ರೂಪಾಯಿ ಬಹುಮಾನ ಮತ್ತು ಟ್ರೋಫಿಯನ್ನು ಶಶಿ ತನ್ನದಾಗಿಸಿಕೊಂಡಿದ್ದಾರೆ.