ಮಾರ್ಚ್​ 21ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭ..

Featured, ರಾಜ್ಯ ನ್ಯೂಸ್

ಬೆಂಗಳೂರು: 2018-19ನೇ ಸಾಲಿನ ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆಯ ವೇಳಾ ಪಟ್ಟಿ ಬಿಡುಗಡೆಯಾಗಿದೆ. ಮಾರ್ಚ್​ 31ರಿಂದ ಏಫ್ರಿಲ್​ 4ರ ವರೆಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ ಅಂತಾ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ. ವೇಳಾ ಪಟ್ಟಿಯನ್ನು ಮಂಡಳಿಯ ವೆಬ್​ಸೈಟ್​ನಲ್ಲಿ  (www.kseeb.Kar.nic.in) ಪ್ರಕಟಿಸಲಾಗಿದೆ.

ಪರೀಕ್ಷಾ ವೇಳಾಪಟ್ಟಿ ಹೀಗಿದೆ:

21-03-2019- ಪ್ರಥಮ ಭಾಷೆ(ಕನ್ನಡ)
23-03-2019- ಕೋರ್​ ಸಬ್ಜೆಕ್ಟ್​1(ಎಲಿಮೆಂಟ್ಸ್​ ಆಫ್​ ಮೆಕಾನಿಕಲ್​, ಎಂಜನಿಯರಿಂಗ್​, ಕಂಪ್ಯೂಟರ್​ ಸೈನ್ಸ್​, ಅರ್ಥಶಾಸ್ತ್ರ)
25-03-2019- ಗಣಿತ, ಸಮಾಜಶಾಸ್ತ್ರ
27-03-2019- ದ್ವಿತೀಯ ಭಾಷೆ( ಇಂಗ್ಲಿಷ್)
29-03-2019- ಸಮಾಜ ವಿಜ್ಞಾನ
02-04-2019- ವಿಜ್ಞಾನ, ರಾಜ್ಯಶಾಸ್ತ್ರ

04-04-2019- ತೃತೀಯ ಭಾಷೆ( ಹಿಂದಿ)

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನ ಸ್ವಲ್ಪ ಬೇಗ ನಡೆಸಲು ಪರೀಕ್ಷಾ ಮಂಡಳಿ ಮುಂದಾಗಿದ್ದು, ಪರೀಕ್ಷೆಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ.