ಮಿಸಸ್ ಗ್ಲ್ಯಾಮರ್ ಇಂಡಿಯಾ 2020′ ಪ್ರಶಸ್ತಿ ಪಡೆದ ಮಂಗಳೂರಿನ ಶ್ರದ್ಧಾ ಜಾವಲ್ಕರ್ -Vishwanews24
ಮಿಸಸ್ ಗ್ಲ್ಯಾಮರ್ ಇಂಡಿಯಾ 2020′ ಪ್ರಶಸ್ತಿ ಪಡೆದ ಮಂಗಳೂರಿನ ಶ್ರದ್ಧಾ ಜಾವಲ್ಕರ್ -Vishwanews24
ಮಂಗಳೂರು: ಮಂಗಳೂರಿನ ಶಕ್ತಿ ನಗರದಲ್ಲಿ ನೆಲೆಸಿರುವ ಮಹಾರಾಷ್ಟ್ರದ ನಾಗ್ಪುರ ಮೂಲದ ಶ್ರದ್ಧಾ ಜಾವಲ್ಕರ್ ಅವರು ಪೂನಾದಲ್ಲಿ ಫೋರ್ಫೋಕ್ಸ್ ಪ್ರೊಡಕ್ಷನ್ಸ್ ಲಿ. ಸಂಸ್ಥೆಯು ಆಯೋಜಿಸಿದ್ದ ‘ಮಿಸಸ್ ಗ್ಲ್ಯಾಮರ್ ಇಂಡಿಯಾ 2020’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಜ.18,19ರಂದು ಗ್ರೂಮಿಂಗ್, ಜ.20ರಂದು ಸ್ಪರ್ಧೆ ನಡೆದಿತ್ತು. ವಿವಿಧ ಸುತ್ತುಗಳಲ್ಲಿ ನಡೆದ ಸ್ಪರ್ಧೆಯಲ್ಲಿ 40 ಮಂದಿ ಫೈನಲ್ಗೆ ತಲುಪಿದ್ದು, ನಂತರ ಫೈನಲ್ ಸ್ಪರ್ಧೆಯಲ್ಲಿ ಶ್ರದ್ಧಾ ಅವರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಅಲ್ಲದೇ, ‘ಮಿಸಸ್ ಕಾನ್ಫ್ಡೆನ್ಸ್’ ಪ್ರಶಸ್ತಿಯನ್ನು ಕೂಡಾ ಗೆದ್ದಿದ್ದಾರೆ.
ಇದನ್ನೂ ಓದಿ : ಉಡುಪಿ:ನಾನು ಆರು ಬಾರಿ ಶಾಸಕನಾಗಿದ್ದರೂ ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ : ಸಚಿವ ಎಸ್ ಅಂಗಾರ -Vishwanews24
ಗ್ರ್ಯಾಂಡ್ ಫೈನಲ್ನಲ್ಲಿ ಸೆಲೆಬ್ರಿಟಿ ಅತಿಥಿಯಾಗಿ ನಟ ನಾಗೇಶ್ ಭೋಸ್ಲೆ ಉಪಸ್ಥಿತರಿದ್ದರು.
ಶ್ರದ್ಧಾ ಅವರು ಈ ಹಿಂದೆ ‘ಮಿಸಸ್ ಮಂಗಳೂರು 2018’ ಸ್ಪರ್ಧೆಯ ಫೈನಲಿಸ್ಟ್ ಆಗಿದ್ದು, ಇದು ಅವರಿಗೆ ಈ ಕ್ಷೇತ್ರಕ್ಕೆ ಬರಲು ಸ್ಪೂರ್ತಿ ನೀಡಿತು. 2019ರಲ್ಲಿ ಅವರು ‘ಮಿಸಸ್ ಸೆಂಟ್ರಲ್ ಇಂಡಿಯಾ’ ಪ್ರಶಸ್ತಿ ಪಡೆದಿದ್ದರು.
