ದ. ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಗೆ ರಾಜ್ಯದ ಅತ್ಯುತ್ತಮ ಮೀನುಗಾರರ ಸಹಕಾರಿ ಮಹಾಮಂಡಲ ಪ್ರಶಸ್ತಿ -Vishwanews24
ಮೀನು ಮಾರಾಟ ಫೆಡರೇಷನ್ ಗೆ ರಾಜ್ಯದ ಅತ್ಯುತ್ತಮ ಮೀನುಗಾರರ ಸಹಕಾರಿ ಮಹಾಮಂಡಲ ಪ್ರಶಸ್ತಿ -Vishwanews24
ಬೆಂಗಳೂರು : ವಿಶ್ವ ಮೀನುಗಾರಿಕೆ ದಿನಾಚರಣೆಯ ಅಂಗವಾಗಿ ಮೀನುಗಾರಿಕೆ ಸಹಕಾರಿ ಕ್ಷೇತ್ರದಲ್ಲಿನ ಶ್ರೇಷ್ಠ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಿಂದ ನೀಡಲ್ಪಡುವ ರಾಜ್ಯದ ಅತ್ಯುತ್ತಮ ಮೀನುಗಾರರ ಸಹಕಾರಿ ಮಹಾಮಂಡಲ ಪ್ರಶಸ್ತಿ ಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಶ್ರೀ ಯಶ್ಪಾಲ್ ಸುವರ್ಣ ರವರು ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ರವರಿಂದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವರಾದ #ಕೋಟ_ಶ್ರೀನಿವಾಸ_ಪೂಜಾರಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ #ಶ್ರೀ_ಕೆ_ರಘುಪತಿ_ಭಟ್, ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರಾದ #ಶ್ರೀ_ಕುಮಾರ್_ಬಂಗಾರಪ್ಪ ಹಾಗೂ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
