ಮುಂದುವರಿದ ಸರ್ಜಿಕಲ್ ಸ್ಟ್ರೈಕ್ : ಪಾಕಿಸ್ತಾನ ಸೇನೆಯ 5 ಪೋಸ್ಟ್ ಗಳು ಧ್ವಂಸಗೊಳಿಸಿದ ಭಾರತೀಯ ಯೋಧರು – Vishwanews24
ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ಬಳಿಕ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಕದನ ವಿರಾಮ ಉಲ್ಲಂಘಿಸಿ ಪಾಕ್ ಸೈನಿಕರು ಭಾರತದತ್ತ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಮಂಗಳವಾರ ರಾತ್ರಿ ಪಾಕಿಸ್ತಾನ ಸೇನೆಯ 5 ಪೋಸ್ಟ್ ಗಳನ್ನು ಧ್ವಂಸ ಮಾಡಿದೆ.
ಪಾಕ್ ದಾಳಿಗೆ ಪ್ರತಿಯಾಗಿ ದಾಳಿ ನಡೆಸಿದ್ದರಿಂದ ರಾಜೌರಿ ಹಾಗೂ ಪೂಂಚ್ ಜಿಲ್ಲೆಗಳಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್ ಐದು ನೆಲೆಗಳನ್ನು ನಾಶ ಮಾಡಲಾಗಿದೆ. ಇದರಿಂದ ಪಾಕ್ ಸೇನೆಗೆ ಸಾಕಷ್ಟು ಪರಿಣಾಮ ಉಂಟಾಗಿದೆ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ. ಉರಿ ಭಾಗದಲ್ಲಿಯೂ ಪಾಕ್ ದಾಳಿ ನಡೆಸುತ್ತಿದೆ ಎಂದು ಹೇಳಲಾಗ್ತಿದೆ.
ನಿನ್ನೆ ಸಂಜೆ 6:30ರಿಂದ ಪಾಕ್ ಅಪ್ರಚೋದಿತ ಗುಂಡಿನ ಹಾಗೂ ಶೆಲ್ ದಾಳಿ ನಡೆಸುತ್ತಲೇ ಇದೆ. ಮಿಸೈಲ್ ಸೇರಿದಂತೆ ಭಾರಿ ಶಸ್ತ್ರಾಸ್ತ್ರಗಳನ್ನೇ ಬಳಸಿ ಪಾಕ್ ದಾಳಿ ಮುಂದುವರೆಸಿದೆ. ಸ್ಥಳೀಯರನ್ನು ಅಡ್ಡ ಇಟ್ಟುಕೊಂಡೇ ದಾಳಿ ನಡೆಸುತ್ತಿದೆ. ಆದರೆ ಜನವಸತಿ ಪ್ರದೇಶದಿಂದ ದೂರದಲ್ಲಿರುವ ಪಾಕ್ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಿದ್ದೇವೆ ಎಂದು ಪಿಆರ್ಒ ತಿಳಿಸಿದ್ದಾರೆ.
