ಮುಂಬಯಿ ಉಳಿಸಲು ಒಂದಾಗುತ್ತಿದ್ದೇವೆ : ಬಿಎಂಸಿ ಚುನಾವಣೆಗೆ ಮೈತ್ರಿ ಘೋಷಿಸಿದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ – vishwanews24

Featured, ರಾಷ್ಟ್ರ ನ್ಯೂಸ್

ಮುಂಬಯಿ ಉಳಿಸಲು ಒಂದಾಗುತ್ತಿದ್ದೇವೆ : ಬಿಎಂಸಿ ಚುನಾವಣೆಗೆ ಮೈತ್ರಿ ಘೋಷಿಸಿದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ

ಮುಂಬಯಿ: ಮಹಾರಾಷ್ಟ್ರದ ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಮುಂಬರುವ ಬಿಎಂಸಿ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದಾರೆ.

ಪಕ್ಷದ ಸಭೆಯಲ್ಲಿ ಉಭಯ ನಾಯಕರು ಒಂದಾಗಿ ಘೋಷಣೆ ಮಾಡಿದ್ದಾರೆ. ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಬುಧವಾರ(ಡಿ24 ) ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರ ಮೈತ್ರಿ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ.
“ಇಲ್ಲಿ ಹಾಜರಿದ್ದ ಜನರ ಸಂಖ್ಯೆ ಮತ್ತು ಉತ್ಸಾಹವನ್ನು ಗಮನಿಸಿದರೆ, ಇಂದು ಐತಿಹಾಸಿಕ ದಿನ ಎಂದು ನಾವು ಹೇಳಬಹುದು” ಎಂದು ರಾವತ್ ಹೇಳಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಮಹಾರಾಷ್ಟ್ರದ ನಾಯಕತ್ವ ಠಾಕ್ರೆ ಕುಟುಂಬಕ್ಕೆ ಸೇರಿದ್ದು ಎಂದು ಪ್ರತಿಪಾದಿಸಿ “ಠಾಕ್ರೆ ಮಾತ್ರ ಮಹಾರಾಷ್ಟ್ರವನ್ನು ಮುನ್ನಡೆಸಬಲ್ಲರು. ಮುಂಬಯಿ ಉಳಿಸಲು ಒಂದಾಗುತ್ತಿದ್ದೇವೆ’ ಎಂದರು.

ಜನವರಿ 15 ರಂದು ಬಿಎಂಸಿ ಚುನಾವಣೆ ನಡೆಯಲಿದೆ. ಅತ್ಯಂತ ಕುತೂಹಲಕಾರಿ ಚುನಾವಣೆಗೆ ಸೀಟು ಹಂಚಿಕೆಯ ವಿವರಗಳನ್ನು ರಾಜ್ ಠಾಕ್ರೆ ಬಹಿರಂಗಪಡಿಸದಿದ್ದರೂ, ಮುಂಬೈನ ಮುಂದಿನ ಮೇಯರ್ ಮರಾಠಿಗರು ಮತ್ತು ಅವರ ಮೈತ್ರಿಕೂಟದಿಂದ ಬರುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.

ಜನವರಿ 15 ರಂದೇ ಚುನಾವಣೆ ನಡೆಯಲಿರುವ ನಾಸಿಕ್ ಮಹಾನಗರ ಪಾಲಿಕೆ ಮತ್ತು ಮಹಾರಾಷ್ಟ್ರದಾದ್ಯಂತ 27 ಇತರ ಮಹಾನಗರ ಪಾಲಿಕೆಗಳಿಗೆ ಸೀಟು ಹಂಚಿಕೆ ವ್ಯವಸ್ಥೆಯನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

Leave a Reply