ಮುಂಬೈ: ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಬಂಧನ – Vishwanews24

Featured, ರಾಷ್ಟ್ರ ನ್ಯೂಸ್

ಮುಂಬೈ: ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಬಂಧನ

ಮುಂಬೈ:ಬಾಲಿವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಅವರ ಪತಿ, ರಿಯಾಲಿಟಿ ಸ್ಟಾರ್ ಆದಿಲ್ ದುರಾನಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ದುರಾನಿ ತನ್ನ ಹಣ ಹಾಗೂ 4 ಲಕ್ಷ ಬೆಲೆಯ ಚಿನ್ನಾಭರಣವನ್ನು ಲಪಟಾಯಿಸಿದ್ದಾನೆ ಎಂದು ನಟಿ ರಾಖಿ ನೀಡಿರುವ ದೂರಿನ ಮೇರೆಗೆ ಮುಂಬೈ ಪೊಲೀಸರು ಎಫ್ ಐಆರ್ ದಾಖಲಿಸಿ ದುರಾನಿಯನ್ನು ಬಂಧಿಸಿದ್ದಾರೆ.

ಓಶಿವಾರ ಪೊಲೀಸರು ಆದಿಲ್ ದುರಾನಿ ವಿರುದ್ಧ ಐಪಿಸಿ ಸೆಕ್ಷನ್ 406 ಹಾಗೂ 420 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ನಂತರ, ಪೊಲೀಸರು ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 498 (ಎ) ಮತ್ತು 377 ಅನ್ನು ಕೂಡ ಸೇರಿಸಿದ್ದಾರೆ. ಆದಿಲ್‌ನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಆದಿಲ್ ತನ್ನ ಮೇಲೆ ಹಲ್ಲೆ ನಡೆಸಿ ತನ್ನ ಫ್ಲಾಟ್ ನಲ್ಲಿದ್ದ ಹಣ ಹಾಗೂ ಆಭರಣಗಳನ್ನು ತನಗೆ ತಿಳಿಯದಂತೆ ದೋಚಿದ್ದಾನೆ ಎಂದು ರಾಖಿ ಆರೋಪಿಸಿದ್ದಾರೆ.

ಉಡುಪಿ : ಪರ್ಕಳ ರಸ್ತೆ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ – Vishwanews24

ಮುಂಬೈನ ಓಶಿವಾರಾ ಪೊಲೀಸ್ ಠಾಣೆಯ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಖಿ, “ಅವನು (ಆದಿಲ್) ನನಗೆ ಹೊಡೆಯುವ ಉದ್ದೇಶದಿಂದ ಬೆಳಗ್ಗೆ ನನ್ನ ಮನೆಗೆ ಬಂದಿದ್ದ. ನಾನು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದೇನೆ,. ಆತ ಆಗಾಗ್ಗೆ ನನ್ನ ಮನೆಗೆ ಭೇಟಿ ನೀಡುತ್ತಾನೆ ಮತ್ತು ಬೆದರಿಕೆ ಹಾಕುತ್ತಾನೆ. ಇಂದೂ ಕೂಡ ನನ್ನನ್ನು ಹೊಡೆಯಲು ಆತ ಬಂದಿದ್ದಾನೆ. ಮನೆಯಲ್ಲಿ, ನಾನು ಭಯಭೀತಳಾಗಿದ್ದೇನೆ ಎಂದು ಹೇಳಿದರು.

ತಾನು ಆದಿಲ್ ನನ್ನು 2022 ರಲ್ಲಿ ವಿವಾಹವಾಗಿದ್ದೇನೆ ಎಂದು ರಾಖಿ ಕಳೆದ ತಿಂಗಳು ಬಹಿರಂಗಪಡಿಸಿದ್ದರು. Instagram ತಮ್ಮ ಮದುವೆ ಪ್ರಮಾಣಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಪ್ರಮಾಣಪತ್ರದಲ್ಲಿ ಮದುವೆಯು ಮೇ 29, 2022 ರಂದು ನಡೆದಿದೆ ಎಂದು ತೋರಿಸುತ್ತಿದೆ.

ಆದಿಲ್ ವಿವಾಹೇತರ ಸಂಬಂಧ ಹೊಂದಿರುವುದಾಗಿಯೂ ರಾಖಿ ಆರೋಪಿಸಿದ್ದಾರೆ.

ಆದಿಲ್ ತನಗೆ ಮೋಸ ಮಾಡಿದ ಕಾರಣ ಆತನಿಂದ ವಿಚ್ಛೇದನವನ್ನು ಪಡೆದುಕೊಳ್ಳುತ್ತೇನೆ ಎಂದು ನಟಿ ಹೇಳಿದ್ದಾರೆ.

Leave a Reply