ಮುಂಬೈ : ನಾಲ್ಕು ಅಂತಸ್ತಿನ ಕಟ್ಟಡ ಕುಸಿತ : ಅವಶೇಷಗಳ ಅಡಿಯಲ್ಲಿ 40 ಕ್ಕೂ ಹೆಚ್ಚು ಜನ ಸಿಲುಕಿರುವ ಸಾಧ್ಯತೆ -Vishwanews24
ಮುಂಬೈ: ಡೋಂಗ್ರಿಯಲ್ಲಿನ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು 12 ಜನರು ಮೃತಪಟ್ಟಿದ್ದು ಸುಮಾರು 40 ಕ್ಕೂ ಹೆಚ್ಚು ಜನರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ.
ಈ ಅವಘಡ ಇಂದು ಬೆಳಗ್ಗೆ 11.40 ಗಂಟೆಯಷ್ಟರಲ್ಲಿ ನಡೆದಿದ್ದು ಅಗ್ನಿಶಾಮಕ ದಳ ಕೂಡಲೇ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ನಾಲ್ಕು ಅಂತಸ್ತಿನ ಕೇಸರ್ಬಾಯ್ ಕಟ್ಟಡ ಕುಸಿದು ತಂದೇಲ್ ರಸ್ತೆಯ ಮೇಲೆ ಬಿದ್ದಿದ್ದಾಗಿ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ (ಬಿಎಂಸಿ) ವಿಪತ್ತು ನಿರ್ವಹಣಾ ಘಟಕ ತಿಳಿಸಿದೆ.
ಇಲ್ಲಿ ಕಿರಿದಾದ ರಸ್ತೆಗಳ ಮೇಲೆ ಹಲವು ಶಿಥಿಲಗೊಂಡ ಕಟ್ಟಡಗಳು ಇವೆ. ಕಳೆದ ವಾರಗಳಲ್ಲಿ ಸುರಿದ ಮಳೆಯಿಂದಾಗಿ ಈ ಪ್ರದೇಶಗಳೆಲ್ಲ ಜಲಾವೃತಗೊಂಡಿತ್ತು.
Mumbai: Four-storey Kesarbai building has collapsed in Dongri. More than 40 people are feared trapped. pic.twitter.com/dZNdF2xQg0
— ANI (@ANI) July 16, 2019
ಸ್ಥಳಕ್ಕೆ ಆಂಬುಲೆನ್ಸ್ಗಳು, ಟ್ರಕ್ಗಳು ಬಂದಿವೆ. ಆದರೆ, ರಸ್ತೆಗಳು ತೀರ ಕಿರಿದಾಗಿರುವುದರಿಂದ ಕುಸಿದುಬಿದ್ದ ಕಟ್ಟಡದತ್ತ ತೆರಳಲು ಸಾಧ್ಯವಾಗುತ್ತಿಲ್ಲ. ಜೆಸಿಬಿಗಳು ಅಲ್ಲಿ ಹೋಗಲು ಸಾಧ್ಯವಿಲ್ಲ. ಕೆಳಗೆ ಕಟ್ಟಡದ ನಿವಾಸಿಗಳು ಸಿಲುಕಿರುವುದರಿಂದ ಎನ್ಡಿಆರ್ಎಫ್ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೈಯಿಂದಲೇ ಮಣ್ಣು, ಸಿಮೆಂಟ್ ಬ್ಲಾಕ್ಗಳನ್ನು ತೆರವುಗೊಳಿಸಬೇಕಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

