ಮುಂಬೈ : ವಸತಿ ಸಮುಚ್ಚಯದಲ್ಲಿ ಅಗ್ನಿ ಅವಘಡ ; 3 ಮಕ್ಕಳು ಸೇರಿ 9 ಮಂದಿಗೆ ಗಾಯ – vishwanews24
ಮುಂಬೈ : ವಸತಿ ಸಮುಚ್ಚಯದಲ್ಲಿ ಅಗ್ನಿ ಅವಘಡ ; 3 ಮಕ್ಕಳು ಸೇರಿ 9 ಮಂದಿಗೆ ಗಾಯ
ಮುಂಬೈ: ಇಲ್ಲಿನ ವಸತಿ ಸಮುಚ್ಚಯದ ಎಲೆಕ್ನಿಕಲ್ ಡಕ್ಸ್ನಲ್ಲಿ ತೀವ್ರ ಬೆಂಕಿ ಕಾಣಿಸಿಕೊಂಡು, ದಟ್ಟ ಹೊಗೆ ಆವರಿಸಿದ ಪರಿಣಾಮ 3 ಮಕ್ಕಳು ಸೇರಿದಂತೆ ಒಟ್ಟು 9 ಜನರು ಗಾಯಗೊಂಡಿರುವ ಘಟನೆ ಮುಂಬೈನ ಕುರ್ಲಾ ಪಶ್ಚಿಮದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಇಲ್ಲಿನ 13 ಮಹಡಿಯ ‘ಕೊಹಿನೂರ್ HDIL ಬಿಲ್ಡಿಂಗ್ No. 5’ ಕಟ್ಟಡದಲ್ಲಿ ಬೆಳಿಗ್ಗೆ ಈ ಅಗ್ನಿ ಅವಘಡ ಸಂಭವಿಸಿದೆ. ಎಲೆಕ್ನಿಕಲ್ ಡಕ್ಸ್ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವೈರಿಂಗ್ ಮತ್ತು ಡಕ್ಟ್ ಉದ್ದಕ್ಕೂ ವ್ಯಾಪಿಸಿದೆ. ಪರಿಣಾಮ ಇಡೀ ಕಟ್ಟಡದಲ್ಲಿ ದಟ್ಟ ಹೊಗೆ ತುಂಬಿಕೊಂಡು 8 ಜನರಿಗೆ ಉಸಿರಾಟದ ತೊಂದರೆ ಉಂಟಾದರೆ, ಮತ್ತೊಬ್ಬ ವ್ಯಕ್ತಿಯ ಬಲಗಾಲಿಗೆ ಗಾಯವಾಗಿದೆ.
ಕೊಲಂಬಿಯಾ: ಚಿನ್ನದ ಗಣಿ ಕುಸಿದು 14 ಮಂದಿ ಸಾವು, ಹಲವರಿಗೆ ಗಾಯ – vishwanews24
ಗಾಯಗೊಂಡವರಲ್ಲಿ 5 ವರ್ಷದ ಬಾಲಕ, ಇಬ್ಬರು ಬಾಲಕಿಯರು ಹಾಗೂ ಒಬ್ಬ ಹಿರಿಯ ವ್ಯಕ್ತಿ ಸೇರಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಮುಂಬೈ ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಿಗ್ಗೆ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದರು.
ಘಟನಾ ಸ್ಥಳಕ್ಕೆ ಪೊಲೀಸರು, ವಿದ್ಯುತ್ ಸರಬರಾಜು ಸಂಸ್ಥೆಯ ಸಿಬ್ಬಂದಿ, 108 ಆಂಬುಲೆನ್ಸ್ ಹಾಗೂ ಸ್ಥಳೀಯ ಮಹಾನಗರ ಪಾಲಿಕೆ ವಾರ್ಡ್ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಗಾಯಾಳುಗಳನ್ನೆಲ್ಲಾ ತಕ್ಷಣವೇ ರಾಜಾವಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು BMC ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಹಾಗೂ ಆಸ್ತಿಪಾಸ್ತಿ ಹಾನಿಯ ಪ್ರಮಾಣ ಇನ್ನಷ್ಟೇ ತಿಳಿದುಬರಬೇಕಿದೆ.
ಸ್ಟಿಂಗ್ ಆಪರೇಷನ್ ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ : ಕೇಂದ್ರ ಸಚಿವ ಶೋಭಾ ಕರಂದ್ಲಾಜೆ – vishwanews24
