ಮುಖ್ಯಮಂತ್ರಿ ವಸತಿ ಯೋಜನೆ : ರಾಜ್ಯಾದ್ಯಂತ 1 ಲಕ್ಷ ಮನೆಗಳ ನಿರ್ಮಾಣ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರುಮುಖ್ಯಮಂತ್ರಿ ವಸತಿ ಯೋಜನೆಯನ್ನು ರಾಜ್ಯದ ಇತರೆಡೆಗೂ ವಿಸ್ತರಿಸಲಿದ್ದು, ಹೆಚ್ಚುವರಿಯಾಗಿ ಇನ್ನೂ 1 ಲಕ್ಷ ಮನೆ ನಿರ್ಮಿಸಲಾಗುವುದು ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ”ಎಲ್ಲರಿಗೂ ಸೂರು ಕಲ್ಪಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮುಖ್ಯಮಂತ್ರಿ ವಸತಿ ಯೋಜನೆ ಅನ್ವಯ ಬಡವರಿಗೆ ಮನೆ ನಿರ್ಮಿಸಲಾಗುವುದು. ಬೆಂಗಳೂರು ನಗರದಲ್ಲಿ ಈಗಾಗಲೇ 1 ಲಕ್ಷ ಮನೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಇದರ ಜತೆಗೆ ಹೊಸದಾಗಿ ಇನ್ನೂ ಒಂದು ಲಕ್ಷ ಮನೆಗಳನ್ನು ಬಹುಮಹಡಿ ಸ್ವರೂಪದಲ್ಲಿ ನಿರ್ಮಿಸಲಾಗುವುದು. ಗುಜರಾತ್‌ ಮಾದರಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ,” ಎಂದು ಹೇಳಿದರು.

”ಋುಣ ಪರಿಹಾರ ಕಾಯಿದೆ 2018ಕ್ಕೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದು, ಅದರ ಅನುಷ್ಠಾನಕ್ಕೆ ನಿಯಮ ರೂಪಿಸಬೇಕಿದೆ. ಈ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿದ್ದೇನೆ.

ಇಂಧನ, ಆಹಾರ, ಲೋಕೋಪಯೋಗಿ, ವಸತಿ ಸೇರಿದಂತೆ ಕೆಲ ಇಲಾಖೆಗಳಿಂದ ಹೆಚ್ಚುವರಿ ಬೇಡಿಕೆ ಇದ್ದು, ಆಹಾರ ಭದ್ರತೆ, ವಸತಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಸದ್ಯದಲ್ಲೇ ಕೇಂದ್ರ ಸಚಿವರನ್ನು ಭೇಟಿಯಾಗಿ ಹೆಚ್ಚಿನ ನೆರವು ಕೋರಲಾಗುವುದು,” ಎಂದು ವಿವರಿಸಿದರು.

\