ಮುರುಡೇಶ್ವರ ಸಮುದ್ರದಲ್ಲಿ ಈಜಲು ತೆರಳಿ ಅಲೆಗಳಿಗೆ ಸಿಲುಕಿದ್ದ ಮೂವರ ರಕ್ಷಣೆ – Vishwanews24
ಮುರುಡೇಶ್ವರ ಸಮುದ್ರದಲ್ಲಿ ಈಜಲು ತೆರಳಿ ಅಲೆಗಳಿಗೆ ಸಿಲುಕಿದ್ದ ಮೂವರ ರಕ್ಷಣೆ
ಕಾರವಾರ: ಸಮುದ್ರದಲ್ಲಿ ಈಜಲು ತೆರಳಿ ಅಲೆಗಳಿಗೆ ಸಿಲುಕಿದ್ದ ಮೂರು ಜನರನ್ನು ಲೈಫ್ ಗಾರ್ಡ್‍ಗಳು ರಕ್ಷಣೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ಕಡಲ ತೀರದಲ್ಲಿ ನಡೆದಿದೆ. ಹಾವೇರಿ ಮೂಲದ ಹಂಸಬಾವಿಯ ಸಿದ್ದಾರ್ಥ್ (24), ದೀಕ್ಷಿತ್ (20), ಸಂತೋಷ್ (24) ರಕ್ಷಣೆಗೊಳಗಾದವರು.
ಲೈಫ್ ಗಾರ್ಡ್‍ಗಳಾದ ಚಂದ್ರಶೇಖರ್ ದೇವಾಡಿಗ, ಜಯರಾಮ್, ಪಾಂಡು, ಹನುಮಂತು ರಕ್ಷಣೆ ಮಾಡಿದ ಲೈಫ್ ಗಾರ್ಡ್‍ಗಳಾಗಿದ್ದಾರೆ. ಐದು ಜನರ ತಂಡ ಧರ್ಮಸ್ಥಳಕ್ಕೆ ಹೋಗಿ ಮುರುಡೇಶ್ವರಕ್ಕೆ ಇಂದು ಆಗಮಿಸಿದ್ದರು. ಅಂತೆಯೇ ಅವರು ಸಮುದ್ರಕ್ಕೆ ಇಳಿದಿದ್ದು, ಈ ವೇಳೆ ಅಲೆಗಳಿಗೆ ಕೊಚ್ಚಿಹೋಗಿದ್ದರು.
