ಮುಲ್ಕಿ : ಮನೆಗೆ ಶೀಟು ಅಳವಡಿಸುವಾಗ ವಿದ್ಯುತ್ ಪ್ರವಹಿಸಿ ಯುವಕ ಸಾವು – vishwanews24
ಮುಲ್ಕಿ : ಮನೆಗೆ ಶೀಟು ಅಳವಡಿಸುವಾಗ ವಿದ್ಯುತ್ ಪ್ರವಹಿಸಿ ಯುವಕ ಸಾವು
ಮುಲ್ಕಿ : ಮನೆಗೆ ಶೀಟು ಅಳವಡಿಸುವಾಗ ವಿದ್ಯುತ್ ಪ್ರವಹಿಸಿ ಯುವಕನೋರ್ವ ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಉಲ್ಲಂಜೆಯಲ್ಲಿ ನಡೆದಿದೆ, ಹಳೆಯಂಗಡಿಯ ಲೈಟ್ ಹೌಸ್ ನಿವಾಸಿ ಅವಿನಾಶ್ ಇಹಲೋಕ ತ್ಯಜಿಸಿದ ಯುವಕ.
ಕಿನ್ನಿಗೋಳಿಯ ಉಲ್ಲಂಜೆಯಲ್ಲಿ ಮನೆಯೊಂದಕ್ಕೆ ಶೀಟ್ ಅಳವಡಿಸುವಾಗ, ಕಬ್ಬಿಣದ ಪೈಪ್ ಮೇಲಕ್ಕೆತ್ತುವಾಗ ವಿದ್ಯುತ್ ತಂತಿ ಕಬ್ಬಿಣದ ಪೈಪ್ ಗೆ ತಾಗಿದೆ. ತಕ್ಷಣ ಅವಿನಾಶ್ ಕುಸಿದು ಬಿದ್ದಿದ್ದು ಅಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಶ್ರೀ ಮಾತಾ ಆಸ್ಪತ್ರೆಯ ಮಾಲೀಕ ಡಾ.ಸತೀಶ್ ಹೃದಯಾಘಾತದಿಂದ ನಿಧನ – vishwanews24
