ಮೂರು ಕೋಟಿಗೂ ಅಧಿಕ ಕೊಂಕಣ ರೈಲ್ವೆ ನಿಗಮದ ಅನುದಾನ : ಮೂಲ್ಕಿ ಸುರತ್ಕಲ್ ರೈಲ್ವೆ ನಿಲ್ದಾಣದ ವಿವಿಧ ಕಾಮಗಾರಿಗೆ ಸಂಸದ ಚೌಟ ಶಿಲಾನ್ಯಾಸ : vishwanews24

Featured, ದಕ್ಷಿಣ ಕನ್ನಡ

ಮೂರು ಕೋಟಿಗೂ ಅಧಿಕ ಕೊಂಕಣ ರೈಲ್ವೆ ನಿಗಮದ ಅನುದಾನ : ಮೂಲ್ಕಿ ಸುರತ್ಕಲ್ ರೈಲ್ವೆ ನಿಲ್ದಾಣದ ವಿವಿಧ ಕಾಮಗಾರಿಗೆ ಸಂಸದ ಚೌಟ ಶಿಲಾನ್ಯಾಸ 

ಮಂಗಳೂರು : ಕೊಂಕಣ ರೈಲ್ವೆ ನಿಗಮದ ವ್ಯಾಪ್ತಿಯ ರೈಲು ನಿಲ್ದಾಣಗಳಾಗಿರುವ ಸುರತ್ಕಲ್ ಮತ್ತು ಮುಲ್ಕಿ ರೈಲ್ವೆ ಸ್ಟೇಷನ್‌ಗೆ ಸಂಬಂಧಿಸಿದ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ ಇಂದು ನಡೆಯಿತು.

ಸಂಸದ ಬ್ರಿಜೇಶ್ ಚೌಟ,ಶಾಸಕರಾದ ಉಮನಾಥ್ ಕೋಟ್ಯಾನ್,ಭರತ್ ಶೆಟ್ಟಿ ಮುಲ್ಕಿ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಒಟ್ಟು ಮೂರು ಕೋಟಿ ಹತ್ತು ಲಕ್ಷ ರೂಪಾಯಿಯಯ ಕೊಂಕಣ ರೈಲ್ವೆ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಕಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಹಲವಾರು ವರ್ಷಗಳ ಬೇಡಿಕೆಗೆ ಕೊಂಕಣ ರೈಲ್ವೆ ನಿಗಮ ಸ್ಪಂದಿಸಿ ಎರಡು ಭಾಗದ ಫ್ಯ್ಲಾಟ್ ಫಾರ್ಮ್ ಮೇಲ್ಛಾವಣಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ ಇಂದು ಕಾಮಗಾರಿಗೆ ಚಾಲನೆ ದೊರಕಿದೆ.

ಈ ಸಂಧರ್ಭದಲ್ಲಿ ಕೊಂಕಣ ರೈಲ್ವೆ ಕಾರವಾರದ ರೀಜನಲ್ ರೈಲ್ವೆ ಮೆನೇಜರ್ ಆಶಾ ಶೆಟ್ಟಿ,ಚೀಫ್ ಇಂಜಿನಿಯರ್ ಕಾರವಾರ ವಿಜಯ ಕುಮಾರ್,ಸೀನಿಯರ್ ರೀಜಿನಲ್ ಟ್ರಾಫಿಕ್ ಮೆನೆಜರ್ ದಿಲಿಪ್ ಭಟ್,ಉಡುಪಿ ವಿಭಾಗದ ಸೀನಿಯರ್ ಇಂಜಿನಿಯರ್ ಗೋಪಾಲಕೃಷ್ಣ,ಪ್ರಮುಖ ಅಧಿಕಾರಿಗಳಾದ ಸುದರ್ಶನ್ ರೆಡ್ಡಿ,ಮೀನಾ,ಪಬ್ಲಿಕ್ ರಿಲೇಶನ್ಸ್ ಮಂಗಳೂರು ವಿಭಾಗದ ಮೇನೆಜರ್ ಸುಧಾ ಕೃಷ್ಣ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು: ಮಣ್ಣಿನಡಿ ಹುದುಗಿ ಹೋಗಿದ್ದ 300 ವರ್ಷಗಳ ಹಳೆಯ ದೈವಸ್ಥಾನ ಪತ್ತೆ – vishwanews24

Leave a Reply