ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸದಂತೆ ಅಧಿಕಾರಿಗಳಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ – vishwanews24
ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ..
STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೂಚನೆ
ಕಾಪು: ಕಾಪು ತಾಲೂಕಿನ ಮೂಳೂರು ಗ್ರಾಮದಲ್ಲಿ ಕಾಪು ಪುರಸಭೆ ವತಿಯಿಂದ ನಿರ್ಮಿಸಲು ಹೊರಟಿರುವ ಕೊಳಚೆ ನೀರು ಶುದ್ಧೀಕರಣ ಘಟಕ (STP) ನಿರ್ಮಾಣ ವಿರೋಧಿಸಿ ಎಸ್.ಟಿ.ಪಿ ನಿರ್ಮಾಣ ವಿರೋಧ ಸಮಿತಿ, ಮೂಳೂರು ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಪ್ರತಿಭಟನೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದು ವಿಶೇಷ.
ಪುರಸಭೆಗೆ ಕೊಳಚೆ ನೀರು ಶುದ್ಧೀಕರಣ ಘಟಕ (STP) ಅತ್ಯಗತ್ಯ. ಆದರೆ ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗಲಿದ್ದು ಸ್ಥಳೀಯರಿಂದ ವಿರೋಧ ಇರುವುದರಿಂದ ಪರಿಸರ ಸಂಬಂದಿ ಇತರೆ ಸಮಸ್ಯೆ ಎದುರಾಗುವುದರಿಂದ ಇದಕ್ಕೆ ಪರ್ಯಾಯವಾಗಿ ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಅಥವಾ ಬದಲಿ ಸ್ಥಳ ಗುರುತಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಇದನ್ನೂ ಓದಿ:
ಮೂಳೂರು ಎಸ್.ಟಿ.ಪಿ ನಿರ್ಮಾಣ ವಿರೋಧ ಸಮಿತಿ ಅವರೊಂದಿಗೆ ಶಾಸಕರು ಕಾಪು ತಹಶೀಲ್ದಾರ್ ಅಂನತ ಶಂಕರ್ ಹಾಗೂ ಕಾಪು ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಅವರಿಗೆ ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ (STP) ನಿರ್ಮಿಸದಂತೆ ಮನವಿ ಸಲ್ಲಿಸಿದರು.
