ಮೂಳೂರು : ಲಾರಿಗೆ ವಾಹನ ಅಡ್ಡವಿರಿಸಿ ಚಾಲಕ ಮತ್ತು ನಿರ್ವಾಹಕನಿಗೆ ಹಲ್ಲೆಗೈದು ಪರಾರಿ – vishwanews24
ಮೂಳೂರು : ಲಾರಿಗೆ ವಾಹನ ಅಡ್ಡವಿರಿಸಿ ಚಾಲಕ ಮತ್ತು ನಿರ್ವಾಹಕನಿಗೆ ಹಲ್ಲೆಗೈದು ಪರಾರಿ
ಕಾಪು: ಮುಂಬಯಿಯಿಂದ ಕೊಚ್ಚಿಗೆ ಹೋಗುತ್ತಿದ್ದ ಲಾರಿಗೆ 2 ಟೆಂಪೋ ಟ್ರಾವಲೆರ್ ವಾಹನಗಳನ್ನು ಅಡ್ಡವಿರಿಸಿ ಚಾಲಕ ಮತ್ತು ನಿರ್ವಾಹಕನಿಗೆ ಕಬ್ಬಿಣದ ರಾಡ್, ಲಿವರ್, ಸ್ಪಾನರ್‌ನಿಂದ ಹಲ್ಲೆಗೈದು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ರವಿವಾರ ರಾತ್ರಿ ನಡೆದಿದೆ.
ಕೇರಳದ ಚಾಲಕ ಯೂನಸ್ ಪಿ.ಕೆ. ಮತ್ತು ಕ್ಲೀನರ್ ಮುಹಮ್ಮದ್ ಮದನಿ ನಜರ್ ಹಲ್ಲೆಗೊಳಗಾದರು.ಕೃತ್ಯ ಎಸಗಿದ ಬಳಿಕ ಆರೋಪಿಗಳು ವಾಹನ ಸಹಿತವಾಗಿ ಮಂಗಳೂರಿನತ್ತ ತೆರಳಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಗಾಯಾಳುಗಳು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
