ಮೂಳೂರು ಸರಣಿ ಕಳ್ಳತನ-ಚಿನ್ನಾಭರಣ-ನಗದು ದೋಚಿದ ಕಳ್ಳರು:-vishwanews24

Featured, ಉಡುಪಿ

ಮೂಳೂರು ಸರಣಿ ಕಳ್ಳತನ-ಚಿನ್ನಾಭರಣ-ನಗದು ದೋಚಿದ ಕಳ್ಳರು:-vishwanews24

ಕಾಪು: ಮೂಳೂರು ಪರಿಸರದ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗ – ನಗದು ದೋಚಿ ಪರಾರಿಯಾದ ಘಟನೆ ರವಿವಾರ ಬೆಳಕಿಗೆ ಬಂದಿದೆ.
ಮೂಳೂರು ಈಸ್ಟ್ ವೆಸ್ಟ್ ನರ್ಸರಿ ಬಳಿಯ ಮಹಮ್ಮದ್ ರಫೀಕ್, ಮಧುರಾ ಕಾಂಪೌಂಡ್ ನ ಇಬ್ರಾಹಿಂ ಮತ್ತು ಶೆಹನಾಜ್ ಎಂಬವರ ಮನೆಗೆ ನುಗ್ಗಿದ ದರೋಡೆಕೋರರು ಅಪಾರ ಪ್ರಮಾಣದ ನಗ – ನಗದನ್ನು ದೋಚಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
“ಮೂರು ಮನೆಗಳಲ್ಲೂ ಯಾರೂ ಇಲ್ಲದೇ ಇರುವ ಸಮಯವನ್ನು ನೋಡಿಕೊಂಡು, ಒಂದೇ ತಂಡದವರು ಈ ಕೃತ್ಯವನ್ನು ಎಸಗಿರುವ ಸಾಧ್ಯತೆಗಳಿದ್ದು, ಕಳವಾಗಿರುವ ಸೊತ್ತುಗಳ ಮೌಲ್ಯ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.”
ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ಎಸ್ಸೈ ರಾಘವೇಂದ್ರ ಸಿ., ಕ್ರೈಂ ಎಸ್ಸೈ ತಿಮ್ಮೇಶ್ ಬಿ.ಎನ್,  ಬೆರಳಚ್ಚು ಮತ್ತು ಶ್ವಾನದಳ ಪಡೆ ಹಾಗೂ ಪೊಲೀಸ್ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಯುತ್ತಿದೆ..