ಮೈತ್ರಿ ಸರ್ಕಾರ ಪತನಕ್ಕೆ ಶುರುವಾಗಿದೆ ದಿನಗಣನೆ : ಶಾಕಿಂಗ್ ಹೇಳಿಕೆ ಕೊಟ್ಟ ದೊಡ್ಡಗೌಡರು !
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳೂ ತುಂಬಿಲ್ಲ. ಆಗಲೇ ಸರ್ಕಾರ ಬಿದ್ದುಹೋಗುವ ಬಗ್ಗೆ ಜನನಾಯಕರೇ ಮಾತನಾಡತೊಡಗಿದ್ದಾರೆ.
ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ಸರ್ಕಾರದ ಸ್ಥಿರತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿಗೆ ದೇವರು ಅಧಿಕಾರ ಕೊಟ್ಟಿದ್ದಾನೆ. ಅಧಿಕಾರ ಕೊಟ್ಟು ಪರೀಕ್ಷಿಸುತ್ತಿದ್ದಾನೆ. ಹೆಜ್ಜೆಹೆಜ್ಜೆಗೂ ಸಂಕಷ್ಟ ಎದುರಾಗುತ್ತಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಹೋರಾಟ ಮಾಡಬೇಕು ಎಂದಿದ್ದಾರೆ.
ಮೈತ್ರಿ ಸರ್ಕಾರ ಮುನ್ನಡೆಸುವ ನೋವನ್ನು ತೋಡಿಕೊಂಡಿರುವ ದೇವೇಗೌಡರು, ದೇವರ ಅನುಗ್ರಹದಿಂದ ಕುಮಾರಸ್ವಾಮಿ ಸಿಎಂ ಆಗಿದ್ದಾರೆ.38 ಸ್ಥಾನ ಗೆದ್ದ ನಮ್ಮ ಪಕ್ಷಕ್ಕೆ 78 ಸ್ಥಾನ ಪಡೆದ ಪಕ್ಷ ಬೆಂಬಲ ನೀಡಿದ್ದರ ಹಿಂದೆ ದೇವರ ಅನುಗ್ರಹ ಇದೆ. ಆದರೂ ದೇವರು ಪರೀಕ್ಷೆ ಒಡ್ಡುತ್ತಿದ್ದಾನೆ. ಏನಾಗುತ್ತದೋ ಭಗವಂತನಿಗೇ ಗೊತ್ತು ಎಂದಿದ್ದಾರೆ.
