ಮೈಸೂರು : ಜೂ. 14 ರಿಂದ 21ರ ವರೆಗೆ ಲಾಕ್ಡೌನ್ ಮುಂದುವರಿಕೆ : ಸೋಮಶೇಖರ್ – Vishwanews24

Featured, ರಾಜ್ಯ ನ್ಯೂಸ್

ಮೈಸೂರು : ಜೂ. 14 ರಿಂದ 21ರ ವರೆಗೆ ಲಾಕ್ಡೌನ್ ಮುಂದುವರಿಕೆ : ಸೋಮಶೇಖರ್ – Vishwanews24

ಮೈಸೂರು : ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದ ದೃಷ್ಟಿಯಿಂದ ಜೂ. 14 ರಿಂದ 21ರ ವರೆಗೆ ಲಾಕ್ಡೌನ್ ಮುಂದುವರಿಕೆ ಮಾಡಲಾಗುವುದು ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಾರೆ.

ಕೋವಿಡ್ ನಿಯಂತ್ರಣಕ್ಕಾಗಿ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಜೂನ್ 14ರ ನಂತರವೂ ಮೈಸೂರಿನಲ್ಲಿ ಲಾಕ್ಡೌನ್ ಮುಂದುವರಿಯಲಿದೆ. ಆದರೆ ಯಾವುದಕ್ಕೆ ವಿನಾಯಿತಿ ಕೊಡಬೇಕು ಎಂಬುದರ ಕುರಿತು ಚರ್ಚಿಸಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಆದೇಶ ಹೊರಡಿಸಲಿದ್ದಾರೆ.

ಅನ್ ಲಾಕ್ ಮಾಡಬೇಕಿದ್ರೆ ಶೇ 5 ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರಬೇಕು ಅನ್ನುವ ನಿಯಮ ಇದೆ. ಮೈಸೂರಿನಲ್ಲಿ ಈಗ ಶೇ.13 ರಷ್ಟು ಪಾಸಿಟಿವಿಟಿ ರೇಟ್ ಇದೆ. ಇದನ್ನು ಅತೀ ಶೀಘ್ರದಲ್ಲಿ ಶೇ.5 ಕ್ಕಿಳಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗ ಬೇಕಿದೆ.

ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಹಾಗೂ ಎಸ್ಪಿ ಒಂದೇ ಕಾರಿನಲ್ಲಿ ಕ್ಷೇತ್ರ ಸಂಚಾರ ಮಾಡಲಿದ್ದಾರೆ.

ಮೈಸೂರಿನ ಎಲ್ಲಾ 11ಕ್ಷೇತ್ರಗಳಿಗೂ ಒಟ್ಟಿಗೆ ಭೇಟಿಕೊಟ್ಟು ಕೋವಿಡ್ ಪರಿಸ್ಥಿತಿ ತಹಬದಿಗೆ ತರಲಿದ್ದಾರೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.