ಮೈಸೂರು ಮೃಗಾಲಯ ರಾಯಭಾರಿಯಾಗಿ ನಟ ದರ್ಶನ್ ನೇಮಕ – Vishwanews24

Featured, ರಾಜ್ಯ ನ್ಯೂಸ್

ಮೈಸೂರು ಮೃಗಾಲಯ ರಾಯಭಾರಿಯಾಗಿ ನಟ ದರ್ಶನ್ ನೇಮಕ – Vishwanews24

ಮೈಸೂರು : ಮೈಸೂರು ಮೃಗಾಲಯದ ರಾಯಭಾರಿಯಾಗಿ ಚಲನಚಿತ್ರ ನಟ ಹಾಗೂ ಪ್ರಾಣಿ ಪ್ರಿಯರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೇಮಿಸಲಾಗಿದೆ. ಮೈಸೂರು ಮೃಗಾಲಯದ ರಾಯಭಾರಿಯಾಗಿ ನೇಮಿಸಿ ಹಾಗೂ ಪ್ರಾಣಿ ರಕ್ಷಣಾ ಅಭಿಯಾನದ ನೇತೃತ್ವವನ್ನು ನಟ ದರ್ಶನ್ ತೂಗುದೀಪ್ ಅವರಿಗೆ ಮೈಸೂರು ಮೃಗಾಲಯ ವಹಿಸಿದೆ.

ಈ ಸಂಬಂಧ ಕಡತವನ್ನು ಮೃಗಾಲಯದ ಅಧ್ಯಕ್ಷ ಎಲ್.ಆರ್.ಮಹದೇವ ಸ್ವಾಮಿ ಅವರು ದರ್ಶನ್‍ಗೆ ಹಸ್ತಾಂತರಿಸಿದರು.

ಪ್ರಾಧಿಕಾರವು 149ನೇ ಆಡಳಿತ ಮಂಡಳಿ ಸಭೆಯಲ್ಲಿ ದರ್ಶನ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಲು ತೀರ್ಮಾನ ಮಾಡಿತ್ತು. ಅದರಂತೆ ನಿನ್ನೆ ಹುಟ್ಟುಹಬ್ಬದ ಪ್ರಯುಕ್ತ ಮೃಗಾಲಯ ಮಂಡಳಿಯು ಶುಭಾಶಯ ಕೋರಿ, ರಾಯಭಾರಿಯಾಗಿ ಪ್ರಕಟಿಸಿದೆ ಎಂದು ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಭಾರತ್​ಗೆ ತಿಳಿಸಿದ್ದಾರೆ.

ಖ್ಯಾತ ಮಲಯಾಳಂ ನಟ ʻಕೊಟ್ಟಾಯಂ ಪ್ರದೀಪ್ʼ ಹೃದಯಾಘಾತದಿಂದ ನಿಧನ – Vishwanews24

Leave a Reply