ಮೋದಿ ಮತ್ತೆ ಪ್ರಧಾನಿ ಆಗಲು ಬಿಡಲ್ಲ ; ಆದರೆ ಅವರನ್ನು ದ್ವೇಷಿಸುವುದಿಲ್ಲ ,ಅವರೊಂದಿಗೆ ಪ್ರಬಲವಾಗಿ ಸ್ಪರ್ಧಿಸಲು ಇಚ್ಛಿಸುತ್ತೇನೆ : ರಾಹುಲ್ ಗಾಂಧಿ – Vishwanews24

Featured, ರಾಷ್ಟ್ರ ನ್ಯೂಸ್

ಭುವನೇಶ್ವರ್: ಇಂದು ಓಡಿಸ್ಸಾದ ಭುವನೇಶ್ವರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದು, ನಾನು ಅವರೊಂದಿಗೆ ಪ್ರಬಲವಾಗಿ ಸ್ಪರ್ಧಿಸಲು ಇಚ್ಛಿಸುತ್ತೇನೆ ಅವರನ್ನು ಮತ್ತೆ ಪ್ರಧಾನಿಯಾಗಲು ನಾನು ಬಿಡುವುದಿಲ್ಲ ಆದರೆ ಅವರನ್ನು ದ್ವೇಷಿಸುವುದಿಲ್ಲ ಎಂದಿದ್ದಾರೆ.

ಭುವನೇಶ್ವರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ ರಾಹುಲ್, ನಾನು ಪ್ರತಿದಿನ ಅವರ ವಿರುದ್ಧ ವಾಗ್ದಾಳಿ ನಡೆಸುತ್ತೇನೆ. ಅವರೂ ಕೂಡ ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ಅವರು ಮುಂದಿನ ಪ್ರಧಾನಿಯಾಗಬಾರದು, ದೇಶದಲ್ಲಿ ಕಾಂಗ್ರೆಸ್ ಜಯಗಳಿಸಬೇಕೆಂದು ಎಂಬುದು ಕೂಡ ನನ್ನ ಆಶಯ.ಆದರೆ ನಾನು ಪ್ರಧಾನಿಯನ್ನು ಎಂದೂ ದ್ವೇಷಿಸುವುದಿಲ್ಲ. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುತ್ತೇನೆ’. ಪ್ರಧಾನಿ ಮೋದಿ ಅವರು ನನ್ನನ್ನು ನಿಂದಿಸಿದಷ್ಟೂ ನಾನು ಅವರನ್ನು ಅಪ್ಪಿಕೊಳ್ಳಲು ಇಷ್ಟ ಪಡುತ್ತೇನೆ ಎಂದು ರಾಹುಲ್​ ಹೇಳಿದ್ದಾರೆ.

ಕಾಂಗ್ರೆಸ್ ವಿರೋಧ ಪಕ್ಷದೊಂದಿಗೆ ಪ್ರಬಲ ಸ್ಪರ್ಧೆ ನೀಡಲು ಬಯಸುತ್ತದೆ.ಆದರೆ ಕಾಂಗ್ರೆಸ್ಸಿಗರು ಯಾರನ್ನೂ ದ್ವೇಷಿಸುವುದಿಲ್ಲ ಎಂದಿದ್ದಾರೆ.