ಮೋದಿ ಸಾರ್ವಜನಿಕ ಸೇವೆಗೆ 25 ವರ್ಷ : ಸೆ.17 ರಿಂದ ದೇಶಾದ್ಯಂತ “ಸೇವಾ ಸಂಕಲ್ಪ ಅಭಿಯಾನ”: ಜೆ. ಪಿ. ನಡ್ಡಾ – vishwanews24

Featured, ರಾಜ್ಯ ನ್ಯೂಸ್

ಮೋದಿ ಸಾರ್ವಜನಿಕ ಸೇವೆಗೆ 25 ವರ್ಷ : ಸೆ.17 ರಿಂದ ದೇಶಾದ್ಯಂತ “ಸೇವಾ ಸಂಕಲ್ಪ ಅಭಿಯಾನ’: ಜೆ. ಪಿ. ನಡ್ಡಾ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನಕ್ಕೆ ಬಂದು 25 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸೆ.17 ರಿಂದ ತಿಂಗಳ ಕಾಲ ದೇಶಾದ್ಯಂತ “ಸೇವಾ ಸಂಕಲ್ಪ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ತಿಳಿಸಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮೋದಿಯವರ ಜನ್ಮದಿನವನ್ನು ಕೇವಲ ಒಬ್ಬ ವ್ಯಕ್ತಿಯ ಜನ್ಮದಿನವಾಗಿ ನೋಡದೆ, 140 ಕೋಟಿ ಭಾರತೀಯರ ಸಂಭ್ರಮದ ಸಂದರ್ಭವಾಗಿ ಆಚರಿಸಲಾಗುವುದು. 2001ರ ಅ.1ರಿಂದ 2026ರ ಅ.17ರವರೆಗೆ ಮೋದಿ ಅವರು ಸಾರ್ವಜನಿಕ ಜೀವನದಲ್ಲಿದ್ದಾರೆ. ಗುಜರಾತ್ ಸಿಎಂ ಆಗಿ ಆರಂಭವಾದ ಅವರ ರಾಜಕೀಯ ಪಯಣ, ದೇಶದ ಪ್ರಧಾನಿಯಾಗಿ ಮುಂದುವರಿದಿದ್ದು, ಸುದೀರ್ಘ ಅವಧಿಗೆ ಪ್ರಧಾನಿ ಆಗಿರುವ ದಾಖಲೆಯನ್ನೂ ನಿರ್ಮಿಸಿದ್ದಾರೆ. ಒಂದೇ ಒಂದು ದಿನವೂ ರಜೆ ಪಡೆಯದೆ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆಂದು ಶ್ಲಾಘಿಸಿದರು.
“ಸೇವಾ ಸೇತು’ ಅಭಿಯಾನದಡಿ ಬ್ಲಾಕ್ ಮಟ್ಟದಲ್ಲಿ ಶಿಬಿರ ಆಯೋಜಿಸಿ, ಕೇಂದ್ರದ ವಿವಿಧ ಯೋಜನೆಗಳಿಂದ ಇನ್ನೂ ವಂಚಿತರಾಗಿರುವ ಅರ್ಹರಿಗೆ ಯೋಜನೆಗಳ ಸೌಲಭ್ಯ ತಲುಪಿಸಲಾಗುವುದು. ಆಶಾ ಕಾರ್ಯಕರ್ತೆ, ಮಹಿಳಾ ಫಲಾನುಭವಿಗಳಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ವಾರಾಣಸಿಯಿಂದ ಮೋದಿಯವರ ಜನ್ಮಸ್ಥಳ ವಡನಗರದವರೆಗೆ ವಿಶೇಷ ಯಾತ್ರೆ ನಡೆಯಲಿದೆ ಎಂದರು.

ಸೆ. 17 ರಿಂದ 19 ರವರೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ – vishwanews24

“ಒಂದು ದೇಶ, ಒಂದು ತೆರಿಗೆ’ (ಜಿಎಸ್‌ಟಿ), ಬಡತನದಿಂದ 25 ಕೋಟಿ ಜನ ಹೊರಬಂದಿರುವುದು, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ರೈಲ್ವೆ, ರಕ್ಷಣಾ ಕ್ಷೇತ್ರ ಸೇರಿ ಮೂಲಸೌಕರ್ಯ ಮತ್ತು ಭದ್ರತಾ ಕ್ಷೇತ್ರದಲ್ಲಿ ದೇಶ ಗಣನೀಯ ಪ್ರಗತಿ ಸಾಧಿಸಿದೆ. ರಕ್ಷಣಾ ರಫ್ತು ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಇನ್ನು ಮಹಿಳಾ ಸಬಲೀಕರಣ, ದೇಶದ ಜನತೆಗೆ 5 ಲಕ್ಷದವರೆಗೆ ಆರೋಗ್ಯ ವಿಮೆ ಸೌಲಭ್ಯ ದೊರೆಯುತ್ತಿದೆ. 2037ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಪ್ರಧಾನಿ ಮೋದಿಯವರ ಕನಸಾಗಿದ್ದು ದೇಶವನ್ನು ಅಭಿವೃದ್ಧಿಯ ಪರ್ವದತ್ತ ಕೊಂಡೊಯ್ದಿದ್ದಾರೆಂದರು.

ವಿಶ್ವದ ಅತ್ಯಂತ ಪ್ರಜಾಪ್ರಭುತ್ವವಾದಿ ನಾಯಕ ನರೇಂದ್ರ ಮೋದಿ. ಇದನ್ನು ವಿಶ್ವವೇ ಒಪ್ಪಿಕೊಂಡಿದೆ. ಅ.17ರಂದು “ಸುಶಾಸನ ಸಂವಾದ’ ಸೇರಿ ತಿಂಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟು 12 ಪ್ರಮುಖ ಕಾರ್ಯಕ್ರಮ ಆಯೋಜಿಸಲಾಗುವುದು. ‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ವೇ ಮೋದಿ ಅವರ ಸಂಕಲ್ಪ ಎಂದರು.

ಮಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ: ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಜೆಪಿ ಹೆಗ್ಡೆ ಮನವಿ – vishwanews24

ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಆರ್.ಅಶೋಕ್, ಚಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿ.ಟಿ.ರವಿ, ಪಿ.ಸಿ.ಮೋಹನ್, ಡಾ|ಸಿ.ಎನ್.ಮಂಜುನಾಥ್, ಡಾ| ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.

Leave a Reply