ಯಕ್ಷಗಾನ ಕಲಾರಂಗ ಉಡುಪಿ – 50ನೇ ಮನೆಯ ಉದ್ಘಾಟನಾ ಸಮಾರಂಭ: vishwanews24
ಯಕ್ಷಗಾನ ಕಲಾರಂಗ ಉಡುಪಿ – 50ನೇ ಮನೆಯ ಉದ್ಘಾಟನಾ ಸಮಾರಂಭ: vishwanews24
ಉಡುಪಿ (Vishwanews24): ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾ ಪೋಷಕ್ ವಿದ್ಯಾರ್ಥಿನಿ ಚೈತ್ರ ಇವಳಿಗೆ ಕಾರ್ಕಳ ತಾಲೂಕಿನ ನೂರಾಲ್ ಬೆಟ್ಟಿನಲ್ಲಿ ರಾಜಗೋಪಾಲ ಆಚಾರ್ಯ ಮತ್ತು ಸುಶೀಲಾ ಆಚಾರ್ಯ ಅವರು ತಮ್ಮ ವಿವಾಹದ ಸುವರ್ಣ ವರ್ಷಾಚರಣೆ ಸವಿನೆನಪಿನಲ್ಲಿ ನಿರ್ಮಿಸಿ ಕೊಡುತ್ತಿರುವ ನೂತನ ಮನೆ ” ಶ್ರೀನಿಲಯ” ದ ಹಸ್ತಾಂತರ ಮತ್ತು ಉದ್ಘಾಟನ ಕಾರ್ಯಕ್ರಮ ಫೆಬ್ರವರಿ 14ರಂದು ಬುಧವಾರ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎಂ ಗಂಗಾಧರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯಕ್ಷಗಾನ ಕಲರಂಗವು 2012ರಿಂದ 2024ರ ವರೆಗೆ ವಿದ್ಯಾ ಪೋಷಕ ವಿದ್ಯಾರ್ಥಿಗಳಿಗೆ ಯಕ್ಷಗಾನ ದಳ ರಂಗದ ಕಲಾವಿದರಿಗೆ ಸುಮಾರು 50 ಮನೆಗಳನ್ನು ನಿರ್ಮಿಸಿಕೊಟ್ಟಿದೆ ಇದುವರೆಗೆ ಎಲ್ಲವೂ ದೇವರ ಇಚ್ಚೆಯಂತೆ ನಡೆದುಕೊಂಡು ಬರುತ್ತಿದೆ ಮತ್ತು ಯಾವುದೇ ಜಾತಿ ಮತ ಭೇದವಿಲ್ಲದ ಸೂರು ನಿರ್ಮಾಣ ಕಾರ್ಯ ದಾನಿಗಳ ನೆರವಿನಿಂದ ನಡೆಯುತ್ತಿದೆ.
ಉಡುಪಿಯ ಪೇಜಾವರ,ಪಲಿಮಾರು,ಸೋದೆ ಮಠಾಧೀಶರ ಕೊಡುಗೆಯು ಇದರಲ್ಲಿ ಅಡಕವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇಂತಹ ಸೇವೆ ನಡೆಸಲು ಯೋಗ್ಯವಂತರಿಗೆ ನೀಡಲು ನಮ್ಮ ಸಂಸ್ಥೆ ಬದ್ದವಾಗಿದೆಂದು ಕಾರ್ಯದರ್ಶಿ ಮುರಳಿ ಕಡೆಕಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಪಿಭಟ್,ನಾರಾಯಣ ಹೆಗ್ಡೆ, ಸದಾಶಿವ ರಾವ್, ವಿ.ಜಿ ಶೆಟ್ಟಿ ಉಪಸ್ಥಿತರಿದ್ದರು.
ವರದಿ: ವಿಶ್ವನ್ಯೂಸ್24 , ಉಡುಪಿ
