ಯಾರಾಗ್ತಾರೆ ರಾಜ್ಯ ದ ಮುಂದಿನ ಸಿಎಂ?.. ಯಾರಿಗೆ ಒಲಿಯಲಿದೆ ಸಿಎಂ ಪಟ್ಟ ?-Vishwanews24

Featured, ರಾಜ್ಯ ನ್ಯೂಸ್

ಯಾರಾಗ್ತಾರೆ ಮುಂದಿನ ಸಿಎಂ?.. ಯಾರಿಗೆ ಒಲಿಯಲಿದೆ ಸಿಎಂ ಪಟ್ಟ ?-Vishwanews24

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿಜಕ್ಕೂ ಕುತೂಹಲಕಾರಿಯಾಗಿವೆ. ಇಂದು ಆ ಎಲ್ಲ ಕುತೂಹಲಕ್ಕೆ ತೆರೆ ಬಿದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ತೆರೆ ಮರೆಯಲ್ಲಿ ಸಿಎಂ ಪಟ್ಟಕ್ಕಾಗಿ ಕಸರತ್ತು ನಡೆಸುತ್ತಿದ್ದವರು ಮತ್ತಷ್ಟು ಆ್ಯಕ್ಟಿವ್ ಆಗಿದ್ದಾರೆ.

ರಾಜ್ಯದ ಜನರಿಗೂ ಯಾರಾಗಬಹುದು ಮುಂದಿನ ಸಿಎಂ ಎನ್ನುವ ಕುತೂಹಲ ಹುಟ್ಟಿಕೊಟ್ಟಿದೆ.

ಸಿಎಂ ರೇಸ್ ನಲ್ಲಿರುವವರು ಯಾರು ?

ಸಿಎಂ ಬದಲಾವಣೆಯ ಸಾದ್ಯತೆಯ ಸುದ್ದಿ ಕೇಳಿ ಬಂದಾಗಿನಿಂದಲೂ ಕೆಲವೊಂದು ಹೆಸರುಗಳು ಮುನ್ನೆಲೆ ಬಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿರುವ ಪ್ರಮುಖರ ಹೆಸರುಗಳು ಇಂತಿವೆ ನೋಡಿ……

• ಗೃಹ ಸಚಿವ ಬಸವರಾಜ್ ಬೊಮ್ಮಾಯಿ

• ಸಚಿವ ಮುರುಗೇಶ್ ನಿರಾಣಿ

• ಶಾಸಕ ಅರವಿಂದ್ ಬೆಲ್ಲದ

• ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ

• ಉಪಮುಖ್ಯಮಂತ್ರಿ ಸಿಎನ್ ಅಶ್ವಥ್ ನಾರಾಯಣ

• ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

• ಆರ್ ಎಸ್ ಎಸ್ ಮುಖಂಡ ಬಿ.ಎಲ್ ಸಂತೋಷ

• ಸಚಿವ ಜಗದೀಶ್ ಶೆಟ್ಟರ್,