ಯೋಗದಿಂದ ಉತ್ತಮ ಆರೋಗ್ಯ ಜೀವನಕ್ಕೆ ಸ್ಫೂರ್ತಿ ಸಿಗುತ್ತದೆ : ಪ್ರಧಾನಿ ಮೋದಿ -Vishwanews24
ರಾಂಚಿ,: ಯೋಗ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದ್ದು, ಇದನ್ನು ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಜಾರ್ಖಂಡ್ನ ರಾಂಚಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಸುಮಾರು 40 ಸಾವಿರ ಜನರ ಜತೆ ಯೋಗ ಮಾಡಿ, ಬಳಿಕ ಜನತೆಯುನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಸಹಕಾರಿ. ಈ ಯೋಗ ಎಲ್ಲರಿಗೂ ದಕ್ಕಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ಯುವ ಸಮುದಾಯ ಯೋಗವನ್ನು ಅಭ್ಯಾಸ ಮಾಡಬೇಕು. ಯೋಗ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಇದು ಆರೋಗ್ಯ ಪೂರ್ಣ ವಾತಾವರಣ ನಿರ್ಮಿಸಲು ಸಹಕಾರಿಯಾಗಲಿದೆ.ದೇಶದ ಎಲ್ಲ ನಾಗರಿಕರೂ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಇದನ್ನು ಕಡ್ಡಾಯವಾಗಿ ಪಾಲಿಸಿದರೆ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಯೋಗದಿಂದ ಮಾನಸಿಕ ಖಿನ್ನತೆ ನಿಯಂತ್ರಿಸಬಹುದು. ಪ್ರತಿನಿತ್ಯದ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಶಾಂತಿ, ಸಮೃದ್ಧಿ ಸದ್ಭಾವನೆಯ ಯೋಗ ಎಲ್ಲರಿಗೂ ಅಗತ್ಯವಾಗಿದೆ. ಬಡತನ ಅನಾರೋಗ್ಯದಿಂದ ಹೊರಬರಲು ಯೋಗ ಸಹಕಾರಿಯಾಗಿದೆ. ಯೋಗ ಫಾರ್ ಹಾರ್ಟ್ ಕೇರ್ ಈ ಬಾರಿಯ ಧ್ಯೇಯವಾಗಿದೆ. ಯೋಗದಿಂದ ಉತ್ತಮ ಆರೋಗ್ಯ ಜೀವನಕ್ಕೆ ಸ್ಫೂರ್ತಿ ಸಿಗುತ್ತದೆ ಎಂದು ಹೇಳಿದ್ದಾರೆ
