ಯೋಗಾಸನದಲ್ಲಿ ಮತ್ತೆರಡು ವಿಶ್ವ ದಾಖಲೆ ಬರೆದ ಉಡುಪಿಯ ತನುಶ್ರೀ – Vishwanews24

Featured, ಉಡುಪಿ

ಉಡುಪಿ: ಉಡುಪಿಯ ತನುಶ್ರೀ ಪಿತ್ರೋಡಿ (10) ಸಂತ ಸಿಸಿಲೀಸ್ ಸಮೂಹ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ಎರಡು ವಿಶ್ವ ದಾಖಲೆ ನಿರ್ಮಿಸಿದ್ದಾಳೆ. 

ಯೋಗಾಸನದಲ್ಲಿ ಎರಡು ಜಾಗತಿಕ ದಾಖಲೆ ಮಾಡಿರುವ 10ರ ಹರೆಯದ ತನುಶ್ರೀ ಪಿತ್ರೋಡಿ ಧನುರಾಸನದ ನಂಬರ್ ಆಫ್ ರೋಲ್ಸ್ ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. 1 ನಿಮಿಷದಲ್ಲಿ 62 ಉರುಳು ಹಾಕಿದ್ದಲ್ಲದೆ, 1.40 ನಿಮಿಷದಲ್ಲಿ 100 ಉರುಳುಗಳನ್ನು ಹಾಕುವ ವಿಶಿಷ್ಟ ದಾಖಲೆ ಇದು.

ಧನುರಾಸನ ಹಾಕಿ ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ (62) ಉರುಳಿದ್ದು ಒಂದು ದಾಖಲೆಯಾದರೆ 1 ನಿಮಿಷ 40 ಸೆಕೆಂಡ್‍ಗಳಲ್ಲಿ ಅತಿ ವೇಗವಾಗಿ 100 ಬಾರಿ ಉರುಳಿದ್ದು ಮತ್ತೊಂದು ದಾಖಲೆಯಾಗಿದೆ.

ಎರಡೂ ದಾಖಲೆಗಳು ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಸೇರಿವೆ. ಒಟ್ಟು ವಿಶ್ವ ದಾಖಲೆಗಳ ಸಂಖ್ಯೆ ನಾಲ್ಕಕ್ಕೇರಿದೆ. 2017, ನ. 11ರಂದು ನಿರಾಲಂಬ ಪೂರ್ಣ ಚಕ್ರಾಸನ ಕಠಿಣ ಯೋಗಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ಗೋಲ್ಡನ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ಸೇರಿದ್ದಳು.

ಈ ಅಪೂರ್ವ ಸಾಧನೆಗಾಗಿ ತನುಶ್ರೀಗೆ ಸ್ಥಳದಲ್ಲೇ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ದಕ್ಷಿಣ ಏಷ್ಯಾ ನಿರ್ದೇಶಕ ಮನೀಶ್ ಬಿಶ್ನೋಯಿ ಪ್ರಮಾಣಪತ್ರ ಹಸ್ತಾಂತರಿಸಿದರು.

ಪೋರಿಯ ಈ ಸಾಧನೆಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸ್ಥಳದಲ್ಲೇ ಪ್ರಮಾಣಪತ್ರ ನೀಡಿ ಗೌರವಿಸಿತು.

ಸತತ 3 ವರ್ಷದಲ್ಲಿ ನಾಲ್ಕು ಸಾಧನೆ ಮಾಡಿರುವ ತನುಶ್ರೀ ಉಡುಪಿ ಸೇಂಟ್ ಸಿಸಿಲೀಸ್ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ.

2018, ಏ.7ರಂದು ಪಿತ್ರೋಡಿಯ ವೆಂಕಟರಮಣ ಸ್ಪೋರ್ಟ್ಸ್‌ ಆ್ಯಂಡ್ ಕಲ್ಚರಲ್ಸ್ ಸಂಸ್ಥೆ ನೇತೃತ್ವದಲ್ಲಿ ‘ಮೋಸ್ಟ್ ಫುಲ್ ಬಾಡಿ ರೆವಲ್ಯುಶನ್ ಮೆಯಿಂಟೈನಿಂಗ್ ಎ ಚೆಸ್ಟ್ ಸ್ಟ್ಯಾಂಡ್ ಪೊಸಿಶನ್’ ಒಂದು ನಿಮಿಷದಲ್ಲಿ 42 ಬಾರಿ ಮಾಡಿ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಸೇರಿದ್ದಳು.

ತನುಶ್ರೀ ಪಿತ್ರೋಡಿ ಸಂತ ಸಿಸಿಲಿ ಕನ್ನಡ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಭರತನಾಟ್ಯ, ಯಕ್ಷಗಾನದಲ್ಲೂ ಸೈ ಎನಿಸಿಕೊಂಡಿದ್ದಾಳೆ.