ರಸಿಕತೆ ಇಲ್ಲದ ಲವ್ ಲೈಫ್ ಬೋರ್ ಆಲ್ವಾ? ರಸಿಕತೆಗೆ ಇಲ್ಲಿದೆ ಟಿಪ್ಸ್….Read https://wp.me/p9KQap-7nh

Featured, ವಿಶೇಷ ಲೇಖನಗಳು

ಸ್ಪೆಷಲ್ ಡೆಸ್ಕ್ : ರಸಿಕತೆ ಇಲ್ಲದ ಲವ್ ಲೈಫ್ ಬೋರ್ ಆಲ್ವಾ? ದಾಂಪತ್ಯವಂತೂ ಸಪ್ಪಗೆ ಇರುತ್ತೆ. ಆದುದರಿಂದ ರೋಮ್ಯಾನ್ಸ್ ಇರಲೇ ಬೇಕು. ಹಾಗಾದ್ರೆ ರೋಮ್ಯಾನ್ಸ್ ಹೆಚ್ಚಲು ಏನು ಮಾಡಬೇಕು ಎಂದು ಕೇಳುತ್ತಿದ್ದೀರಾ? ಆದಾಕ್ಕೆ ಮಾಡಬೇಕಾಗಿದ್ದು, ಇಷ್ಟೇ.. ಈ ಸೂಪರ್ ಆಹಾರಗಳನ್ನು ಸೇವಿಸಿದ್ರೆ ಆಯಿತು..

ಡಾರ್ಕ್‌ ಚಾಕಲೇಟ್‌ : ಡಾರ್ಕ್‌ ಚಾಕಲೇಟ್‌ ಮೆದುಳಿನಲ್ಲಿ ಸೆರೋಟೊನಿನ್‌ ಮತ್ತು ಡೊಪಾಮೈನ್‌ ಸ್ತರಗಳನ್ನು ಹೆಚ್ಚಿಸುತ್ತದೆ. ಇದು ಸಂತೋಷದಿಂದ ಇರಲು, ಮೂಡ್ ಬದಲಾಯಿಸಲು ಸಹಕಾರಿಯಾಗುತ್ತದೆ.

ನಟ್ಸ್‌ : ಇವುಗಳು ಎನರ್ಜಿ ಬೂಸ್ಟರ್‌ಗಳಾಗಿವೆ. ಬಾದಾಮಿ, ಬ್ರೆಝಿಲ್‌ ನಟ್ಸ್‌, ವಾಲ್‌ನಟ್‌ ಮತ್ತು ಪೀನಟ್‌ ಲಿಬಿಡೊ ಹಾರ್ಮೋನ್‌ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ರೋಮ್ಯಾನ್ಸ್ ಹೆಚ್ಚುತ್ತದೆ.

ಗಾರ್ಲಿಕ್‌ : ಬೆಳ್ಳುಳ್ಳಿ ತಿಂದರೆ ಮೂಡ್‌ ಉತ್ತಮವಾಗುತ್ತದೆ. ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಆಯಲಿಸಿನ್‌ ಇರುತ್ತದೆ. ಅವು ರಕ್ತ ಸಂಚಾರ ಸುಗಮವಾಗಲು ಸಹಾಯವಾಗುತ್ತದೆ.

ಮೀನು : ಮೀನಿನಲ್ಲಿ ವಿಟಾಮಿನ್‌ ಬಿ ಹೆಚ್ಚಿನ ಪ್ರಮಾಣದಲ್ಲಿದ್ದು, ಅದು ಲಿಬಿಡೊ ಹಾರ್ಮೋನ್‌ ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ವಿಟಾಮಿನ್‌ ಬಿ3 ಸೆಕ್ಸುವಲ್‌ ಎನರ್ಜಿ ಹೆಚ್ಚಿಸಿ, ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಓಟ್ಸ್‌ : ಓಟ್ಸ್‌ ರಕ್ತದಲ್ಲಿರುವ ಟೆಸ್ಟೊಸ್ಟೆರಾನ್‌ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದುದರಿಂದ ಇದನ್ನು ನಿಮ್ಮ ಆಹಾರದಲ್ಲಿ ಹೆಚ್ಚಾಗಿ ಸೇರಿಸಿ.

ಪ್ರೊಟೀನ್‌ : ಪ್ರೊಟೀನ್‌ ಆರೋಗ್ಯಕ್ಕೆ ಮಾತ್ರವಲ್ಲ, ಬದಲಾಗಿ ಬೆಡ್‌ನಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಪ್ರೊಟೀನ್‌ ಪ್ರಮಾಣ ಹೆಚ್ಚಿಸಲು ಮರೆಯಬೇಡಿ.