ರಸ್ತೆಬದಿ ಲೈಟ್ ಕಂಬಕ್ಕೆ ಬೈಕ್ ಡಿಕ್ಕಿ : ಯುವಕ ಸಾವು – Vishwanews24
ರಸ್ತೆಬದಿ ಲೈಟ್ ಕಂಬಕ್ಕೆ ಬೈಕ್ ಡಿಕ್ಕಿ : ಯುವಕ ಸಾವು – Vishwanews24
ಉಳ್ಳಾಲ: ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ 18 ವರ್ಷದ ಸವಾರ ಮೃತಪಟ್ಟ ಘಟನೆ ಉಳ್ಳಾಲದ ಮಾಸ್ತಿಕಟ್ಟೆ ಎಂಬಲ್ಲಿ ಡಿ.08ರ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಮದನಿನಗರ ನಿವಾಸಿ ಕೈಫ್ (18) ಮೃತ ಯುವಕ. ಕೆಲಸದ ನಿಮಿತ್ತ ಉಳ್ಳಾಲದಿಂದ ಮಂಗಳೂರು ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾನು ಮೋದಿ ವಿರೋಧಿಯಲ್ಲ, ನೀತಿಗಳ ವಿರೋಧಿ : ಮಂಗಳೂರಿನಲ್ಲಿ ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ – Vishwanews24
