ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ : ಡಿ.ಕೆ.ಶಿ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಮಗೆ ನಮ್ಮದೇ ಆದ ರಾಜಕೀಯ ಕಾರ್ಯತಂತ್ರ ಇದೆ. ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕು ಎಂದು ನಮಗೆ ತಿಳಿದಿದೆ. ದಿಗ್ವಿಜಯ ಸಿಂಗ್ ಒಬ್ಬರೇ ಅಲ್ಲ, ನಾನೂ ಇಲ್ಲಿದ್ದೇನೆ.  ಅವರಿಗೆ ಯಾವ ರೀತಿ ಬೆಂಬಲ ನೀಡಬೇಕು ಎಂದು ತಿಳಿದಿದೆ. ಆದರೆ ಕರ್ನಾಟಕದಲ್ಲಿ  ಕಾನೂನು ಅವ್ಯವಸ್ಥೆ ಉಂಟು ಮಾಡಲು ನಾನು ಬಯಸುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ಅವರು ಹಿಂತಿರುಗಿ  ಬರುತ್ತಾರೆ ಎಂಬ ನಿರೀಕ್ಷೆ ನಮಗಿತ್ತು ಆದರೆ ಅವರನ್ನು ಅಲ್ಲಿ ತಡೆ ಹಿಡಿದಾಗ ಅವರ ಕುಟುಂಬದವರಿಂದ ಸಂದೇಶ ಬರತೊಡಗಿತು. ನಾನು ಐವರು  ಶಾಸಕರಲ್ಲಿ ಮಾತನಾಡಿದ್ದೇನೆ, ಅವರನ್ನು ಅಲ್ಲಿ ಹಿಡಿದಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅವರ ಮೊಬೈಲ್ ಕಿತ್ತುಕೊಳ್ಳಲಾಗಿದೆ . ಪ್ರತಿ ಕೋಣೆಯ ಮುಂದೆ ಪೊಲೀಸ್ ಕಾವಲಿದೆ. ಅವರ ಮೇಲೆ 24/7 ನಿಗಾ ವಹಿಸಲಾಗಿದೆ ಎಂದು ದಿಗ್ವಿಜಯ ಸಿಂಗ್  ಹೇಳಿದ್ದಾರೆ.