ರಾಜ್ಯದಲ್ಲಿ ಇನ್ಮುಂದೆ ಬಹುಮತದ ಸರಕಾರ : ಸಂತಸ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ -Vishwanews24
ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಂಸದೆ ಶೋಭಾ ಕರಂದ್ಲಾಜೆ ಸಂತಸ ವ್ಯಕ್ತಪಡಿಸಿದ್ದು ಗೆಲುವಿನಿಂದ ರಾಜ್ಯದಲ್ಲಿ ಬಿಜೆಪಿ ಬಹುಮತದ ಸರಕಾರವಾಗಿದೆ ಎಂದಿದ್ದಾರೆ.
ಕಳೆದ ಕೆಲವು ತಿಂಗಳಿಂದ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ತಲೆಧೋರಿತ್ತು. ಸಹಜವಾಗಿ ಇದು ಆತಂಕಕ್ಕೆ ಕಾರಣವಾಗಿತ್ತು. ಆದರೆ ಉಪಚುನಾವಣೆ ಗೆಲುವು ರಾಜಕೀಯ ಅಸ್ಥಿರತೆಯನ್ನು ಕೊನೆಗೊಳಿಸಿದೆ ಎಂದರು.
ಇದೇ ವೇಳೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ಬಿಎಸ್ವೈ ಎಲ್ಲಾ ಕ್ಷೇತ್ರಗಳಿಗೂ ಕಾಲಿಗೆ ಚಕ್ರ ಕಟ್ಟಿದ ಹಾಗೆ ತಿರುಗಾಡಿದ್ದಾರೆ. ಇದರ ಪರಿಣಾಮ 12 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿದೆ. ಈ ವಯಸ್ಸಿನಲ್ಲಿಯೂ ಪ್ರತಿ ಕ್ಷೇತ್ರಗಳಿಗೆ ಓಡಾಡಿದ ಪ್ರಚಾರ ಮಾಡಿ, ಇತರರಿಗೂ ಹುಮ್ಮಸ್ಸು ನೀಡಿದ ರೀತಿ ಮಾದರಿ ಎಂದರು.
ಕೆ.ಆರ್ ಪೇಟೆಯಲ್ಲಿ ನಾಮಪತ್ರ ಸಲ್ಲಿಕೆ ದಿನ ಚೆಪ್ಪಲು ಎಸೆದು ಅವಮಾನ ಮಾಡಿದ್ದರು. ಅದರ ಸೇಡನ್ನು ಉಪಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ತೀರಿಸಿಕೊಂಡಿದ್ದಾರೆ ಎಂದರು.
