ರಾಜ್ಯದ ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್ : ಇಂದಿನಿಂದ ಲಾಕ್ ಡೌನ್ ವಿಶೇಷ ಆರ್ಥಿಕ ಪ್ಯಾಕೇಜ್ ನಿಮ್ಮ ಖಾತೆಗೆ ಜಮೆ – Vishwanews24
ರಾಜ್ಯದ ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್ : ಇಂದಿನಿಂದ ಲಾಕ್ ಡೌನ್ ವಿಶೇಷ ಆರ್ಥಿಕ ಪ್ಯಾಕೇಜ್ ನಿಮ್ಮ ಖಾತೆಗೆ ಜಮೆ – Vishwanews24
ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜೂನ್.14ರವರೆಗೆ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಿದ್ದಲ್ಲದೇ, 500 ಕೋಟಿ ವಿಶೇಷ 2ನೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದರು. ಇದರಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೂ 2 ಸಾವಿರ ರೂಪಾಯಿ ಆರ್ಥಿಕ ಪರಿಹಾರವನ್ನು ಘೋಷಿಸಿದ್ದರು. ಇಂತಹ ವಿಶೇಷ ಆರ್ಥಿಕ ಪ್ಯಾಕೇಜ್ ಹಣ, ಬೀದಿ ಬದಿಯ ವ್ಯಾಪಾರಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಇಂದಿನಿಂದ ಜಮೆ ಆಗಲಿದೆ.
ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ನಿವಾಸದಲ್ಲಿ, ಬೀದಿ ಬದಿಯ ವ್ಯಾಪಾರಿಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಹಣ ವರ್ಗಾವಣೆಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ 2.20 ಲಕ್ಷ ಬೀದಿ ಬದಿಯ ವ್ಯಾಪಾರಿಗಳಿಗೆ ಡಿಬಿಟಿ ಮೂಲಕ, ನೇರವಾಗಿ ಅವರ ಬ್ಯಾಂಕ್ ಖಾತೆಗೆ ಇಂದಿನಿಂದ ಜಮೆಗೊಳ್ಳಲಿದೆ.
ಸಿಎಂ ಯಡಿಯೂರಪ್ಪ ಬೀದಿ ಬದಿಯ ವ್ಯಾಪಾರಿಗಳಿಗೂ ವಿಶೇಷ ಆರ್ಥಿಕ ಪ್ಯಾಕೇಜ್ ಆಗಿ 2 ಸಾವಿರ ನೀಡೋದಾಗಿ ಘೋಷಣೆಯನ್ನು ಮಾಡಿದ್ದರು. ಇದರಿಂದಾಗಿ 2.20 ಲಕ್ಷ ಬೀದಿ ಬದಿಯ ವ್ಯಾಪಾರಿಗಳಿಗೆ ಸಹಾಯ ಆಗಲಿದೆ. ಇದಕ್ಕಾಗಿ 44 ಕೋಟಿ ಹಣ ವ್ಯಯವಾಗಲಿದೆ ಎಂದಿದ್ದರು. ಇಂತಹ ಹಣವನ್ನು ಬೀದಿ ಬದಿಯ ವ್ಯಾಪಾರಿಗಳ ಖಾತೆಗೆ ಡಿಬಿಟಿ ಮೂಲಕ, ಇಂದಿನಿಂದ ಜಮೆ ಮಾಡೋದಕ್ಕೆ ಶುರುವಾಗಲಿದೆ. ಈ ಮೂಲಕ ಸಿಹಿಸುದ್ದಿ ದೊರೆಯಲಿದೆ.
