ರಾಜ್ಯ ಬಿಜೆಪಿ ಸರ್ಕಾರವು ದಿವಾಳಿಯಾಗಿದ್ದು, ಸರ್ಕಾರದ ಬಳಿ ಶಾಸಕರ ಅನುದಾನ ನೀಡಲೂ ಹಣವಿಲ್ಲ : ಎಂ.ಬಿ.ಪಾಟೀಲ್ -Vishwanews24

Featured, ರಾಜ್ಯ ನ್ಯೂಸ್

ರಾಜ್ಯ ಬಿಜೆಪಿ ಸರ್ಕಾರವು ದಿವಾಳಿಯಾಗಿದ್ದು, ಸರ್ಕಾರದ ಬಳಿ ಶಾಸಕರ ಅನುದಾನ ನೀಡಲೂ ಹಣವಿಲ್ಲ :

ಎಂ.ಬಿ.ಪಾಟೀಲ್ -Vishwanews24

ವಿಜಯಪುರ : ರಾಜ್ಯ ಬಿಜೆಪಿ ಸರ್ಕಾರವು ದಿವಾಳಿಯಾಗಿದ್ದು, ಸರ್ಕಾರದ ಬಳಿ ಶಾಸಕರ ಅನುದಾನ ನೀಡಲೂ ಹಣವಿಲ್ಲ ಎಂದು ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.

ಹಿಂದಿನ ಸಿಎಂ ನೀಡಿದ ಅನುದಾನವನ್ನು ಈಗಿನ ಸಿಎಂ ತಡೆಹಿಡಿದಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ್, ಹಿಂದಿನ ಸಮ್ಮಿಶ್ರ ಸರ್ಕಾರ, ಅದರ ಹಿಂದಿನ ಕಾಂಗ್ರೆಸ್ ಸರ್ಕಾರ ನೀಡಿದ ಶಾಸಕರ ಅನುದಾನವನ್ನೂ ಕಡಿತಗೊಳಿಸಲಾಗುತ್ತಿದೆ ಎಂದು ಹೇಳಿದರು.

ಇನ್ನು ನಮ್ಮ ಮತಕ್ಷೇತ್ರದಲ್ಲಿ ಯಾರೆಲ್ಲಾ ಮಹಾನುಭಾವರು ಮತ್ತು ಪುಣ್ಯಾತ್ಮರು ಈ ಭಾಗದ ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ರೂ. ಅನುದಾನ ತರುವುದಾಗಿ ಹೇಳಿದ್ದರೋ ಅದೆಲ್ಲವನ್ನೂ ಜನವರಿ ಮಾತನಾಡುತ್ತೇನೆ. ಕೊರೊನಾ ಸಂದರ್ಭದಲ್ಲಿ ಹೆಚ್ಚು ಮಾತನಾಡುವುದಿಲ್ಲ. ಜನವರಿಯಿಂದ ಈ ಬಗ್ಗೆ ಮಾತನಾಡುತ್ತೇನೆ ಎಂದರು.