ರಾಜ್ ಕುಮಾರ್ ಸಮಾಧಿ ಪಕ್ಕದಲ್ಲೇ ನಟ ಪುನೀತ್ ರಾಜ್‍ಕುಮಾರ್ ಅಂತ್ಯಕ್ರಿಯೆಗೆ ಸರ್ಕಾರ ಒಪ್ಪಿಗೆ – Vishwanews24

Featured, ರಾಜ್ಯ ನ್ಯೂಸ್

ರಾಜ್ ಕುಮಾರ್ ಸಮಾಧಿ ಪಕ್ಕದಲ್ಲೇ ನಟ ಪುನೀತ್ ರಾಜ್‍ಕುಮಾರ್ ಅಂತ್ಯಕ್ರಿಯೆಗೆ ಸರ್ಕಾರ ಒಪ್ಪಿಗೆ – Vishwanews24

ಬೆಂಗಳೂರು:ರಾಜ್ ಕುಮಾರ್ ಸಮಾಧಿ ಪಕ್ಕದಲ್ಲೇ ನಟ ಪುನೀತ್ ರಾಜ್‍ಕುಮಾರ್ ರವರ ಅಂತ್ಯಕ್ರಿಯೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.ಕುಟುಂಬಸ್ಥರು ಒಪ್ಪಿದರೆ ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಎಲ್ಲಾ ವ್ಯವಸ್ಥೆಗಳೊಂದಿಗೆ ಸರ್ಕಾರ ತಯಾರಿ ಮಾಡಿಕೊಂಡು ಅದೇ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಿಕೊಡಲು ಒಪ್ಪಿಗೆ ಸೂಚಿಸಿದೆ.ಈಗ ಕುಟುಂಬಸ್ಥರು ಒಪ್ಪಿಗೆ ಸೂಚಿಸುತ್ತಾರಾ ನೊಡಬೇಕಿದೆ. ಕಂಠೀರವ ಸ್ಟುಡಿಯೋದಲ್ಲಿ ಮಾಡಬೇಕಾ ಅಥವಾ ಬೇರೆಡೆ ಮಾಡಬೇಕಾ ಎಂಬುದು ಅವರೇ ನಿರ್ಧರಿಸಬೇಕಿದೆ.

ಕಂಠೀರವ ಸ್ಟುಡಿಯೋದಲ್ಲಿ ನಟ ರಾಜ್‍ಕುಮಾರ್ ರವರ ಸಮಾಧಿ ಇದೆ.ಅಲ್ಲಿ ಪ್ರತಿ ವರ್ಷ ರಾಜ್ ರ ಹುಟ್ಟುಹಬ್ಬದಂದು ಮತ್ತು ನಿಧನರಾದ ದಿನದಂದು ಬಂದು ಪೂಜೆ ಸಲ್ಲಿಸುತ್ತಾರೆ.ಅವರನ್ನು ಗೌರವ ಸಲ್ಲಿಸಲು ಅಲ್ಲಿಗೆ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ .ಅದೊಂದು ದೇವಸ್ಥಾನ ರೂಪದಲ್ಲಿ ಮಾರ್ಪಟ್ಟಿದೆ.ಈಗ ಅದೇ ಜಾಗದಲ್ಲಿ ಪುನೀತ್ ರಾಜ್‍ಕುಮಾರ್ ರವರ ಅಂತ್ಯಕ್ರಿಯೆ ಆಗಬೇಕು ಎಂಬುದು ಎಲ್ಲರ ಹೆಬ್ಬಯಕೆ.ಇನ್ನು ಕುಟುಂಬದವರು ಅಲ್ಲೇ ಅಂತ್ಯಕ್ರಿಯೆ ನಡೆಸಲು ಒಪ್ಪಿಗೆ ಸೂಚಿಸಿದರೆ ಅಪ್ಪಾಜಿ ಪಕ್ಕದಲ್ಲೇ ಪುನೀತ್ ರಾಜ್‍ಕುಮಾರ್ ರವರ ಅಂತ್ಯಕ್ರಿಯೆ ಜರುಗಲಿದೆ.

ಉಡುಪಿ : ನಿಟ್ಟೂರು ಪ್ರೌಢಶಾಲೆಯಲ್ಲಿ ಶ್ರೀ ಪಿ.ಎಲ್. ಅಣ್ಣಾಜಿ ರಾವ್ ಸ್ಮಾರಕ ಧರ್ಮನಿಧಿ ಬೆಂಗಳೂರು, ವಿದ್ಯಾರ್ಥಿವೇತನ ವಿತರಣೆ – Vishwanews24